ರಸ್ತೆಗಿಳಿಯುವ ಮುನ್ನವೇ ಹೊಸ ಸ್ವಿಫ್ಟ್ ಸೂಪರ್ ಹಿಟ್

New Maruti Suzuki Swift
ದೇಶದ ರಸ್ತೆಯಲ್ಲಿ ಸ್ವಿಫ್ಟ್ ಕಾರುಗಳು ಜನಪ್ರಿಯ. ಅತ್ಯಧಿಕ ಮಾರಾಟದ ಸ್ವಿಫ್ಟ್ ಕಾರುಗಳ ಉತ್ಪಾದನೆಯನ್ನೇ ಕಂಪನಿ ಇತ್ತೀಚೆಗೆ ನಿಲ್ಲಿಸಿತ್ತು. ಒಬ್ಬ ಮುಖ್ಯಮಂತ್ರಿ ರಾಜಿನಾಮೆ ನೀಡಿದಾಗ ಮತ್ತೊಬ್ಬ ಬರುವಂತೆ ಹೊಸ ಸ್ವಿಫ್ಟ್ ಕಾರು ಶೀಘ್ರದಲ್ಲಿ ರಸ್ತೆಗಿಳಿಯಲಿದೆ. ಮೂಲಗಳ ಪ್ರಕಾರ ಆಗಸ್ಟ್ 17ರಂದು ನಿಮ್ಮ ಹತ್ತಿರದ ಮಾರುತಿ ಶೋರೂಂಗಳಲ್ಲಿ ಹೊಸ ಸ್ವಿಫ್ಟ್ ದೊರಕಲಿದೆ.

ಅಚ್ಚರಿಯ ವಿಷಯ ಅದಲ್ಲ. ಈ ಕಾರು ರಸ್ತೆಗಿಳಿಯುವ ಮುನ್ನವೇ ಹೊಸ ಹವಾ ಸೃಷ್ಟಿಸಿದೆ. ಇದೀಗ ಕಂಪನಿಯ ಮೂಲಗಳ ಪ್ರಕಾರ 38 ಸಾವಿರ ನೂತನ ಸ್ವಿಫ್ಟ್ ಕಾರುಗಳ ಬುಕ್ಕಿಂಗ್ ಆಗಿದೆ. ಫ್ರೀಲಾಂಚ್ ಆರ್ಡರ್ ನೋಡಿ ಕಂಪನಿಯಂತು ಸಕತ್ ಖುಷಿಗೊಂಡಿದೆ.

ಅಂತೂ ಶೀಘ್ರದಲ್ಲಿ ನೂತನ ಮಾರುತಿ ಸುಜುಕಿ ಸ್ವಿಫ್ಟ್ ಶೋರೂಂಗಳನ್ನು ಪ್ರವೇಶಿಸಲಿದೆ. ಇದು ನೋಡಲು ಹಳೆಯ ಕಾರಿನಂತೆ ಇದ್ದರೂ ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆ ನಿರೀಕ್ಷಿಸಲಾಗಿದೆ. ಕ್ಯಾಬಿನ್ ಸ್ಥಳಾವಕಾಶ ಮತ್ತು ಸ್ಪೋರ್ಟಿ ಲುಕ್ ನ ಬೃಹತ್ ವೀಲ್ ಬೇಸಿನಿಂದ ಹೊಸ ಕಾರು ಇಷ್ಟವಾಗುವಂತ್ತಿದೆ. ನಿರ್ಮಾಣ ಗುಣಮಟ್ಟ ಕೂಡ ಆಕರ್ಷಕವಾಗಿದೆಯಂತೆ!

ನೂತನ ಸ್ವಿಫ್ಟ್ 1.2 ಲೀಟರಿನ ಕೆ-ಸೀರಿಸ್ ನ ಪೆಟ್ರೊಲ್ ಎಂಜಿನ್ ಮತ್ತು 1.3 ಲೀಟರಿನ ಡಿಡಿಎಸ್ಐ ಡೀಸಲ್ ಎಂಜಿನ್ ಆಯ್ಕೆಯಲ್ಲಿ ದೊರಕಲಿದೆ. ನೂತನ ಸ್ವಿಫ್ಟ್ ದರ ಇನ್ನೂ ಸ್ಪಷ್ಟವಾಗಿಲ್ಲ. ಆದರೂ ಬುಕ್ಕಿಂಗ್ ನಲ್ಲಿ ಸೂಪರ್ ಹಿಟ್ ಆಗಿದೆ. ಸ್ವಿಫ್ಟ್ ಗೆ ಫೈಟ್ ಕೊಡಬಹುದೇ ಮುಂದಿನ ಪುಟದಲ್ಲಿರುವ ಕಾರುಗಳು?? ನೆಕ್ಸ್ಟ್

Article Published On: Monday, August 1, 2011, 13:13 [IST]
English summary
Coming Soon: New Maruti swift will soon be in Maruti Suzuki Showrooms. Some source said that New Swift launch date August 17(2011). Just look New Swift.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+