ಆಲ್ಟೋಗೆ ಫೈಟ್ ನೀಡಲು ಮಹೀಂದ್ರ ಸಣ್ಣಕಾರು

ನೂತನ ಕಾರಿನ ದರ 2.5 ಲಕ್ಷ ರು.ನಿಂದ ಮೂರು ಲಕ್ಷ ರು. ಆಸುಪಾಸಿನಲ್ಲಿರುವ ನಿರೀಕ್ಷೆಯಿದ್ದು ಮಾರುತಿ ಸುಜುಕಿ ಆಲ್ಟೊಗೆ ನೇರ ಪೈಪೋಟಿ ನೀಡುವ ನಿರೀಕ್ಷೆಯಿದೆ. ನೂತನ ಕಾರು 2013-14ರ ವೇಳೆಗೆ ರಸ್ತೆಗಿಳಿಯುವ ನಿರೀಕ್ಷೆಗಳಿವೆ.
ಮಹೀಂದ್ರ ವೆರಿಟೊ ಕಂಪನಿಯ ಸಣ್ಣ ಕಾರು. ಕಳೆದ ಐದು ವರ್ಷಗಳಿಂದ ವೆರಿಟೊ ರಸ್ತೆಯಲ್ಲಿರುವುದರಿಂದ ಹೊಸ ಕಾರು ವೆರಿಟೊ ಫ್ಲಾಟ್ ಫಾರ್ಮ್ ಬಳಸದಿರುವ ಸಾಧ್ಯತೆಯೂ ಇದೆ. ಕಂಪನಿಯು ಒಂದು ಕಾರಿನ ಫ್ಲಾಟ್ ಫಾರ್ಮನ್ನು ಇನ್ನೊಂದಕ್ಕೆ ಕಾಪಿ ಮಾಡುವುದು ತೀರಾ ಕಡಿಮೆ. ಉದಾಹರಣೆಗೆ ಸ್ಕಾರ್ಪಿಯೋ ಮತ್ತು ಕ್ಷೆಲೊ ಕಾರುಗಳೂ ತನ್ನದೇ ಆದ ವೈಶಿಷ್ಟ್ಯಗಳೊಂದಿಗೆ ಬಂದಿವೆ.
ಆದರೆ ಕಂಪನಿಯು ಅಧಿಕೃತವಾಗಿ ನೂತನ ಸಣ್ಣ ಕಾರಿನ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಕಂಪನಿಯ ಚೆನ್ನೈ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗ ನೂತನ ಕಾರೊಂದನ್ನು ವಿನ್ಯಾಸ ಮಾಡುತ್ತಿರುವುದಾಗಿ ಗುಟ್ಟು ಬಿಟ್ಟುಕೊಟ್ಟಿದೆ. ಕೆಲವು ವರದಿಗಳ ಪ್ರಕಾರ ಮಹೀಂದ್ರ ನೂತನ ಕಾರಿನ ವಿನ್ಯಾಸಕ್ಕಾಗಿ ಈಗಾಗಲೇ 800 ಕೋಟಿ ರು. ಹೂಡಿಕೆ ಮಾಡಿದೆಯಂತೆ!


Click it and Unblock the Notifications








