ಟೊಯೊಟಾ ಸ್ಥಾನಕ್ಕೆ ಕುತ್ತು, ಜಿಎಂ ವಿಶ್ವಕ್ಕೆ ಅಗ್ರಜ

ಈ ವರ್ಷದ ಮೊದಲ ಆರು ತಿಂಗಳಲ್ಲಿ 45 ಲಕ್ಷ ಕಾರುಗಳನ್ನು ಮಾರಾಟ ಮಾಡಿದೆ. ಆದರೆ ಇದೇ ಅವಧಿಯಲ್ಲಿ ಜಪಾನಿನ ಟೊಯೊಟಾ ಕೇವಲ 37.1 ಲಕ್ಷ ಕಾರು ಮಾರಾಟ ಮಾಡಿದೆ. ಹೀಗಾಗಿ ಜನರಲ್ ಮೋಟರ್ಸ್ ವಿಶ್ವದ ಬೃಹತ್ ಕಾರು ತಯಾರಿಕಾ ಕಂಪನಿ ಎಂದು ಡೆಟ್ರೈಟ್ ನ್ಯೂಸ್ ವಾದಿಸಿದೆ.
ಕಳೆದ ವರ್ಷದ ಮಾರಾಟಕ್ಕೆ ಹೋಲಿಸಿದರೆ ಜನರಲ್ ಮೋಟರ್ಸ್ ಮಾರಾಟ ಶೇಕಡಾ 8.9ರಷ್ಟು ಇಳಿಕೆ ಕಂಡಿದೆ. ಆದರೆ ಟೊಯೊಟಾ ಮಾರಾಟ ಶೇಕಡಾ 23ರಷ್ಟು ಇಳಿಕೆ ಕಂಡಿದೆ. ಟೊಯೊಟಾ ಮಾರಾಟ ಇಳಿಕೆಗೆ ಪ್ರಮುಖವಾಗಿ ಜಪಾನಿನ ಭೂಕಂಪ ಮತ್ತು ಸುನಾಮಿ ಕಾರಣವಾಗಿದೆ. ಈ ಪ್ರಾಕೃತಿಕ ದುರಂತದಿಂದ ಜಪಾನ್ ನಲ್ಲಿ ಉತ್ಪಾದನೆ, ಮಾರಾಟ, ಬಿಡಿಭಾಗಗಳ ಪೂರೈಕೆ ಸೇರಿದಂತೆ ಕಂಪನಿಯ ಎಲ್ಲಾ ವಹಿವಾಟಿನ ಮೇಲೆ ಪರಿಣಾಮ ಬೀರಿತ್ತು.
ಟೊಯೊಟಾಕ್ಕೆ ಇದು ಮಾತ್ರ ಕೆಟ್ಟ ಸುದ್ದಿಯಲ್ಲ. ಮೊದಲ ಸ್ಥಾನ ಹೋಗಲಿ. ಅದನ್ನು ಹಿಂದಿಕ್ಕಬಹುದು ಎಂದು ಟೊಯೊಟಾ ಎದೆಯುಬ್ಬಿಸುವ ಹಾಗಿಲ್ಲ. ಯಾಕೆಂದರೆ ಈಗ ವಿಶ್ವದ ಬೃಹತ್ ಕಾರು ಕಂಪನಿಗಳಲ್ಲಿ ಟೊಯೊಟಾ ಎರಡನೇ ಸ್ಥಾನದಲ್ಲಿದ್ದರೂ ಫೋಕ್ಸ್ ವ್ಯಾಗನ್ ಗೆ ಭಯಪಡಬೇಕಿದೆ. ಫೋಕ್ಸ್ ವ್ಯಾಗನ್ ಶೀಘ್ರದಲ್ಲಿ ಟೊಯೊಟಾ ಸ್ಥಾನವನ್ನು ಆಕ್ರಮಿಸಿಕೊಳ್ಳುವ ಸಾಧ್ಯತೆಯಿದೆ ಎಂದು ವರದಿಗಳು ಹೇಳಿವೆ.


Click it and Unblock the Notifications








