ಮಾರುತಿ ಎ ಸ್ಟಾರ್: ಮೈಲೇಜ್ ದರ ಸೂಪರ್ ಸ್ಟಾರ್

ಮೈಲೇಜ್ ವಿಷಯದಲ್ಲಿ ಮಾತ್ರವಲ್ಲದೇ ಇದರಲ್ಲಿ ಒಂದಿಷ್ಟು ಆಕರ್ಷಕ ಫೀಚರ್ ಗಳಿವೆ. ಸುರಕ್ಷತೆಯ ಸವಾರಿಗೆ ಏರ್ ಬ್ಯಾಗ್ ಮತ್ತು ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್ ಇದೆ. ಆರಾಮದಾಯಕತೆ ಮತ್ತು ಸುರಕ್ಷಿತ ಸವಾರಿಗೆ ಮಾರುತಿ ಎ-ಸ್ಟಾರ್ ಸೂಕ್ತವಾಗಿದೆ.
ಮಾರುತಿ ಸುಜುಕಿ ಎ-ಸ್ಟಾರ್ ಕಾರುಗಳು ನಾಲ್ಕು ಆವೃತ್ತಿಗಳಲ್ಲಿ ದೊರಕುತ್ತವೆ. ಎ-ಸ್ಟಾರ್ ಎಲ್ ಎಕ್ಸ್ಐ, ಎ-ಸ್ಟಾರ್ ವಿಎಕ್ಸ್ಐ, ಎ-ಸ್ಟಾರ್ ಝಡ್ಎಕ್ಸ್ಐ, ಎ-ಸ್ಟಾರ್ ವಿಎಕ್ಸ್ಐ ಆಟೋಮ್ಯಾಟಿಕ್(ಎಬಿಎಸ್) ಎಂಬ ನಾಲ್ಕು ಆವೃತ್ತಿಗಳಲ್ಲಿ ದೊರಕುತ್ತಿವೆ.
ಕೆ.ಬಿ. ಸೀರಿಸ್ ಎಂಜಿನ್ ಹೊಂದಿರುವ ಎ-ಸ್ಟಾರ್ ಅತ್ಯುತ್ತಮ ಮೈಲೇಜ್ ನೀಡುವ ಕಾರು ಕೂಡ ಹೌದು. ಸಿಟಿ ರಸ್ತೆಯಲ್ಲಿ ಸುಮಾರು ಪ್ರತಿಲೀಟರ್ ಇಂಧನಕ್ಕೆ 13 ಕಿ.ಮೀ. ಮತ್ತು ಹೆದ್ದಾರಿಗಳಲ್ಲಿ ಸುಮಾರು 19 ಕಿ.ಮೀ. ಮೈಲೇಜ್ ನೀಡುತ್ತದೆ. ಬೆಂಗಳೂರು ಎಕ್ಸ್ ಶೋರೂಂನಲ್ಲಿ ಎ-ಸ್ಟಾರ್ ದರ 3.67 ಲಕ್ಷ ರು.ನಿಂದ 4.40 ಲಕ್ಷ ರು. ಆಸುಪಾಸಿನಲ್ಲಿದೆ.
ಮೈಲೇಜ್ ಮತ್ತು ದರದ ವಿಷಯದಲ್ಲಿ ಮುಂದಿನ ಪುಟದಲ್ಲಿರುವ ಕಾರುಗಳು ನಿಮಗೆ ಇಷ್ಟವಾಗಬಹುದು...


Click it and Unblock the Notifications








