ಆಗಸ್ಟ್ 19: ಫೋರ್ಸ್ ಒನ್ ಕಾರು ಅನಾವರಣ

ಇದು ಫೋರ್ಸ್ ಮೋಟರಿನ ಮೊದಲ ಪ್ರಯಾಣಿಕ ಕಾರು. ಇಲ್ಲಿವರೆಗೆ ಕಂಪನಿಯು ವಾಣಿಜ್ಯ ವಾಹನ ಸೇರಿದಂತೆ ಹಲವು ಸೆಗ್ಮೆಂಟಿನ ವಾಹನಗಳನ್ನು ಉತ್ಪಾದಿಸುತ್ತಿತ್ತು. ಇದೀಗ ಮೊದಲ ಬಾರಿಗೆ ಪ್ರಯಾಣಿಕ ಕಾರು ಮಾರುಕಟ್ಟೆಯಲ್ಲಿ ಅದೃಷ್ಟ ಪರೀಕ್ಷೆ ಮಾಡಲು ನಿರ್ಧರಿಸಿದೆ.
ಫೋರ್ಸ್ ಒನ್ ಕಾರು 4 ವೀಲ್ ಡ್ರೈವ್ ಮತ್ತು 2 ವೀಲ್ ಡ್ರೈವ್ ಆವೃತ್ತಿಗಳಲ್ಲಿ ದೊರಕಲಿದೆ. ಆಗಸ್ಟ್ ನಲ್ಲಿ ನೂತನ ಕಾರನ್ನು ಹೊರತರುವುದಾಗಿ ಕಂಪನಿ ಈ ಹಿಂದೆಯೇ ಪ್ರಕಟಿಸಿತ್ತು. ಆದರೆ ಯಾವ ದಿನಾಂಕದಂದು ಅಂತ ಕಂಪನಿ ತಿಳಿಸಿರಲಿಲ್ಲ. ಆದರೆ ಇಂದು ಮಹೂರ್ತ ಫಿಕ್ಸ್ ಮಾಡಿದೆ.
ನೂತನ ಫೋರ್ಸ್ ಒನ್ ಐಷಾರಾಮಿ ಮತ್ತು ಆರಾಮದಾಯಕತೆ ಫೀಚರ್ಸ್ ಗಳನ್ನು ಹೊಂದಿರಲಿದೆಯಂತೆ. ರಸ್ತೆಗಿಳಿಯುವ ಮುನ್ನ ನೂತನ ಕಾರಿನ ವಿಶೇಷತೆ, ಫೀಚರ್ಸ್ ಇತ್ಯಾದಿಗಳನ್ನು ತಿಳಿದುಕೊಳ್ಳದಿದ್ದರೆ ಹೇಗೆ? ಮುಂದೆ ಕ್ಲಿಕ್ ಮಾಡಿ.


Click it and Unblock the Notifications








