ಆಲ್ಟೊ ಕೆ10: ಗೂಗಲ್ ಹುಡುಕಾಟದಲ್ಲಿ ಮೊದಲ ಸ್ಥಾನ

ಕರೀನಾ ಕಪೂರ್, ನಮಿತಾ, ರಮ್ಯಾ, ಕತ್ರಿನಾ ಕೈಫ್, ಐಶ್ವರ್ಯ ರೈ, ದರ್ಶನ್, ಸುದೀಪ್, ಸಲ್ಮಾನ್ ಖಾನ್, ಪುನೀತ್ ರಾಜ್ ಕುಮಾರ್ ಹೀಗೆ ಹುಡುಕಾಟ ಸಾಗುತ್ತದೆ.
ಇವನ್ನೆಲ್ಲ ಹೊರತುಪಡಿಸಿದರೆ ಮಾಹಿತಿಯ ಹುಡುಕಾಟ ಗೂಗಲ್ ನಲ್ಲಿ ಪ್ರಮುಖ. ಮಾರುಕಟ್ಟೆಗೆ ಬಂದಿರುವ ಹೊಸ ಮೊಬೈಲ್, ಹೊಸ ಕಾರು, ಹೊಸ ಬೈಕ್ ಇವೆಲ್ಲದರ ಹುಡುಕಾಟವೂ ಇಂಟರ್ ನೆಟ್ ನಲ್ಲಿ ಜೋರಾಗಿದೆ.
ವಾಹನಲೋಕದ ವಿಷಯಕ್ಕೆ ಬಂದರೆ ಗೂಗಲ್ ನಲ್ಲಿ ಹೆಚ್ಚು ಸರ್ಚ್ ಮಾಡಿದ ಟಾಪ್ ಟೆನ್ ಕಾರುಗಳ ಪಟ್ಟಿ ನಮಗೆ ಸಿಕ್ಕಿದೆ. ಹೆಚ್ಚು ಜನರು ಹುಡುಕಿದ್ದು ದೇಶದ ಬೃಹತ್ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿಯ ಫ್ಯಾಮಿಲಿ ಕಾರು ಆಲ್ಟೊ ಕೆ10. ಹೀಗಾಗಿ ಆಲ್ಟೊ ಕಾರಿಗೆ ನಂಬರ್ ಒನ್ ಸ್ಥಾನ ದೊರಕಿದೆ.
ಆಲ್ಟೊ ಕಾರು ಸಿಟಿ ರಸ್ತೆಗಳಲ್ಲಿ ಪ್ರತಿಲೀಟರ್ ಪೆಟ್ರೊಲ್ ಗೆ 13 ಕಿ.ಮೀ. ಮೈಲೇಜ್ ನೀಡುತ್ತದೆ. ಹೆದ್ದಾರಿಗಳಲ್ಲಿ 18 ಕಿ.ಮೀ. ಮೈಲೇಜ್ ನೀಡುತ್ತದೆ. ಇದರ ದರ 2.80 ಲಕ್ಷ ರು.ನಿಂದ 3.34 ಲಕ್ಷ ರು.(ಬೆಂಗಳೂರು ಎಕ್ಸ್ ಶೋರೂಂ ದರ)ವರೆಗಿದೆ.


Click it and Unblock the Notifications








