ಬೀಟನ್ನು ಬೀಟ್ ಮಾಡಿದ ಮಾರುತಿ ಕಿಝಾಷಿ

ಮಾರುತಿ ಸುಜುಕಿ ಕಿಝಾಷಿ: ಹೀಗೆ ಹೆಚ್ಚು ಜನರು ಗೂಗಲ್ ನಲ್ಲಿ ಹುಡುಕಾಡಿದ ಕಾರುಗಳಲ್ಲಿ ನಾಲ್ಕನೇ ಸ್ಥಾನ ಪಡೆದಿರುವುದು ಮಾರುತಿ ಸುಜುಕಿ ಕಿಝಾಷಿ. ಮಾರುತಿ ಹೊರತರುವ ಕಾರುಗಳ ಮೇಲೆ ಗ್ರಾಹಕರಿಗೆ ಹೆಚ್ಚು ನಿರೀಕ್ಷೆಯಿರುತ್ತದೆ. ಇದೊಂದು ನಂಬಿಕಸ್ತ ಬ್ರಾಂಡ್ ಆಗಿ ದೇಶದಲ್ಲಿ ಜನಪ್ರಿಯತೆ ಪಡೆದಿದೆ. ಕಂಪನಿಯು ಕಳೆದ ವರ್ಷ ಹೊರತಂದ ಕಿಝಾಷಿ ಕುರಿತು ಗ್ರಾಹಕರು ಹೆಚ್ಚು ಆಸಕ್ತಿ ವಹಿಸಿದ್ದಾರೆ.
ಷೆವರ್ಲೆ ಬೀಟ್: ಜನರಲ್ ಮೋಟರ್ಸ್ ದೇಶಕ್ಕೆ ಪರಿಚಯಿಸಿದ ಬ್ರಾಂಡ್ ಷೆವರ್ಲೆ. ಷೆವರ್ಲೆ ಕಂಪನಿಯ ಬೀಟ್ ಕಾರಿಗೆ ಹೆಚ್ಚು ಬೇಡಿಕೆಯಿದೆ. ಪುಟ್ಟ ಕುಟುಂಬ ಆರಾಮವಾಗಿ ಸವಾರಿ ಮಾಡಬಹುದಾದ ಬೀಟ್ ಗೂಗಲ್ ಹುಡುಕಾಟದಲ್ಲಿ 5ನೇ ಸ್ಥಾನ ಪಡೆದಿದೆ.
ಗೂಗಲ್ ವಾಹನ ಹುಡುಕಾಟದಲ್ಲಿ ನಿಸ್ಸಾನ್ ಮೈಕ್ರಾ ಮತ್ತು ಹ್ಯುಂಡೈ ಫ್ಲೂಡಿಕ್ ವೆರ್ನಾ ಕ್ರಮವಾಗಿ ಆರು ಮತ್ತು ಏಳನೇ ಸ್ಥಾನಪಡೆದಿವೆ. ಉಳಿದಂತೆ ಫೋಕ್ಸ್ ವ್ಯಾಗನ್ ಪೊಲೊ, ಟೊಯೊಟಾ ಎಟಿಯೋಸ್ ಮತ್ತು ಮಾರುತಿ ಸುಜುಕಿ ಎಸ್ಎಕ್ಸ್4 ಡೀಸಲ್ ಕಾರು ಹುಡುಕಾಟದಲ್ಲಿ 8, 9 ಮತ್ತು 10ನೇ ಸ್ಥಾನ ಪಡೆದಿವೆ.


Click it and Unblock the Notifications








