ಜಾಗತಿಕ ಮಾರುಕಟ್ಟೆಯತ್ತ ಆರಿಯಾ ಕಣ್ಣು

"ಟಾಟಾ ಆರಿಯಾ ಅಂತರ್ ರಾಷ್ಟ್ರೀಯ ಸ್ಟಾಂಡರ್ಡ್ ಹೊಂದಿರುವ ಕ್ರಾಸೊವರ್ ಕಾರಾಗಿದೆ. ಹೀಗಾಗಿ ಆರಿಯಾಕ್ಕೆ ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಬರುವ ನಿರೀಕ್ಷೆಯಿದೆ. ಈಗಾಗಲೇ ಕಂಪನಿಯು ಆರಿಯಾವನ್ನು ನೇಪಾಲಕ್ಕೆ ರಫ್ತು ಮಾಡಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ವಿದೇಶಿ ರಸ್ತೆಗೆ ಆರಿಯಾ ಕಾರು ಪ್ರವೇಶಿಸಲಿದೆ" ಎಂದು ಟಾಟಾ ಮೋಟರ್ಸ್ ಪ್ರಯಾಣಿಕ ಕಾರು ವಿಭಾಗದ ಮುಖ್ಯಸ್ಥ ರಾಜೇಶ್ ನಾಯರ್ ಹೇಳಿದ್ದಾರೆ.
"ಸದ್ಯ ಕಂಪನಿಯು ಹಬ್ಬದ ಸೀಸನ್ ಮೂಡಿನಲ್ಲಿದೆ. ಆರಿಯಾ ಸೇರಿದಂತೆ ಟಾಟಾ ಕಾರುಗಳ ಮಾರಾಟ ಈ ಸಂದರ್ಭದಲ್ಲಿ ಹೆಚ್ಚಾಗುವ ನಿರಿಕ್ಷೆಯಿದೆ" ಎಂದು ಅವರು ಹೇಳಿದ್ದಾರೆ.
"ಟಾಟಾ ಮೋಟರ್ಸ್ ಕಳೆದ ಆರ್ಥಿಕ ವರ್ಷದಲ್ಲಿ ದೇಶದಲ್ಲಿ 42,500 ಯುಟಿಲಿಟಿ ವೆಹಿಕಲ್ ಮಾರಾಟ ಮಾಡಿದೆ. ಇದರಿಂದ ಕಂಪನಿಯ ಮಾರುಕಟ್ಟೆ ಪಾಲು ಶೇಕಡ 13ಕ್ಕೆ ತಲುಪಿದೆ. ಕಂಪನಿಯು ಇನ್ನಷ್ಟು ಆವೃತ್ತಿಗಳನ್ನು ಪರಿಚಯಿಸಲಿದ್ದು ಮಾರುಕಟ್ಟೆಯಲ್ಲಿ ಹೆಚ್ಚು ಪ್ರಾಬಲ್ಯ ಪಡೆಯಲಿದೆ" ಎಂದು ನಾಯರ್ ಅಭಿಪ್ರಾಯಪಟ್ಟಿದ್ದಾರೆ. ರಸ್ತೆಗಿಳಿದ ನಂತರ ಸುಮಾರು 300 ಟಾಟಾ ಆರಿಯಾ ಕಾರು ಮಾರಾಟವಾಗಿರುವುದಾಗಿ ಅವರು ಹೇಳಿದ್ದಾರೆ.


Click it and Unblock the Notifications








