ಸ್ವಿಫ್ಟ್, ಜಾಝ್ ನಂತರ ಫೋರ್ಸ್ ಒನ್ ಬಂತು

ನೂತನ ಫೋರ್ಸ್ ಒನ್ ಕಾರನ್ನು ಕಂಪನಿಯ ಬ್ರಾಂಡ್ ಅಂಬಾಸಿಡರ್ ಅಮಿತಾಬ್ ಬಚ್ಚನ್ ಬಿಡುಗಡೆ ಮಾಡಿದ್ದು ವಿಶೇಷ. ಇಂದು ಮುಂಬೈನಲ್ಲಿ ಬಿಡುಗಡೆಗೊಂಡ ನೂತನ ಕಾರಿನ ಎಕ್ಸ್ ಶೋರೂಂ ದರ 10.65 ಲಕ್ಷ ರುಪಾಯಿ ಆಗಿದೆ.
ನೂತನ ಕಾರಿಗೆ ಅಳವಡಿಸಿರುವ ಸಸ್ಪೆನ್ಷನ್ ಇಂಗ್ಲೆಂಡ್ ಮೂಲದ ಲೋಟಸ್ ಕಂಪನಿಯದು. ಈ ಕಂಪನಿಯು ಪ್ರಮುಖವಾಗಿ ಪೋರ್ಷ್ ಮತ್ತು ಫೆರಾರಿ ಕಾರುಗಳಿಗೆ ಸಸ್ಪೆನ್ಷನ್ ಸಿದ್ಧಪಡಿಸುತ್ತದೆ. ಟಾಟಾ ಆರಿಯಾ ಮತ್ತು ಮಹೀಂದ್ರ ಸ್ಕಾರ್ಪಿಯೊ ಕಾರುಗಳಲ್ಲಿ ಕೂಡ ಲೋಟಸ್ ಸಸ್ಪೆನ್ಷನ್ ಇದೆ.
ನೂತನ ಕಾರು ಮಹೀಂದ್ರ ಸ್ಕಾರ್ಪಿಯೋ ಕಾರಿಗೆ ಪ್ರಬಲ ಪೈಪೋಟಿ ನೀಡುವ ನಿರೀಕ್ಷೆಯಿದೆ. ಇದರೊಂದಿಗೆ ಶೀಘ್ರದಲ್ಲಿ ರಸ್ತೆಗಿಳಿಯಲಿರುವ ಟಾಟಾ ಸಫಾರಿ ಮೆರ್ಲಿನ್ ಕಾರಿಗೂ ಇದು ಸ್ಪರ್ಧೆ ನೀಡುವ ಸಾಧ್ಯತೆಯಿದೆ.


Click it and Unblock the Notifications