ಸಣ್ಣಕಾರು ಮಹೀಂದ್ರ ವೆರಿಟೊಗೆ ದಾರಿಬಿಡಿ

ಸಬ್ ಕಾಂಪ್ಯಾಕ್ಟ್ ಕಾರು ವೆರಿಟೊವನ್ನು ಶೀಘ್ರದಲ್ಲಿ ಅನಾವರಣ ಮಾಡುವುದಾಗಿ ಕಂಪನಿ ಕಡೆಯಿಂದ ಪ್ರಕಟಣೆ ಹೊರಬಿದ್ದಿದೆ. ಆದರೆ ಯಾವಾಗ ಎಂಬ ಪ್ರಶ್ನೆಗೆ ಇನ್ನೂ ಉತ್ತರ ದೊರಕಿಲ್ಲ.
ನೂತನ ವೆರಿಟೊ ಕಾರಿನ ಅಬಕಾರಿ ಸುಂಕ ಮತ್ತು ದರ ಕಡಿಮೆ ಇರಲಿದೆಯಂತೆ. ಇದರೊಂದಿಗೆ ಪ್ರೀಮಿಯಂ ವೆರಿಟೊ ಸೆಡಾನ್ ಕಾರೊಂದನ್ನು ಕೂಡ ಕಂಪನಿ ಹೊರತರಲಿದೆ ಎಂದು ಮೂಲಗಳು ಹೇಳಿವೆ.
ಮಾರುತಿ ಸುಜುಕಿ ಆಲ್ಟೊಗೆ ಪೈಪೋಟಿ ನೀಡಲು ಶಕ್ತವಾಗಿರುವ ಸಣ್ಣಕಾರೊಂದನ್ನು ಮಹೀಂದ್ರ ಅಭಿವೃದ್ಧಿಪಡಿಸುತ್ತಿದೆ. ಸಣ್ಣಕಾರು ಪ್ರೀಯರು ಮಹೀಂದ್ರದ ಸಣ್ಣಕಾರಿನ ನಿರೀಕ್ಷೆಯಲ್ಲಿರಬಹುದು.


Click it and Unblock the Notifications








