ಆಲ್ಟೊಗೆ ಎದುರಾಳಿ- ಹ್ಯುಂಡೈ ಎಚ್ 800

ಎಚ್800 ಎಂಬ ನೂತನ ಸಣ್ಣಕಾರನ್ನು ಈಗಾಗಲೇ ಚೆನ್ನೈನಲ್ಲಿ ಕಂಪನಿ ಟೆಸ್ಟ್ ಮಾಡಿದೆ. ನೂತನ ಎಚ್800 ಕಾರು 800 ಸಿಸಿಯ ಪೆಟ್ರೊಲ್ ಎಂಜಿನ್ ಹೊಂದಿರಲಿದೆಯಂತೆ. ಇದರ ದರ ಸುಮಾರು 3 ಲಕ್ಷ ರು. ಆಸುಪಾಸಿನಲ್ಲಿರುವ ನಿರೀಕ್ಷೆಯಿದೆ. ಅಗ್ಗದ ಕಾರು ಮಾರುಕಟ್ಟೆಯಲ್ಲಿ ಹ್ಯುಂಡೈ800 ಆಳ್ವಿಕೆ ಮಾಡುತ್ತದೋ ಕಾದುನೋಡಬೇಕಷ್ಟೇ!
ನೂತನ ಹ್ಯುಂಡೈ ಎಚ್800 ಕಾರು 2011ರ ಅಂತ್ಯಕ್ಕೆ ಅಥವಾ ಮುಂದಿನ ವರ್ಷದ ಆರಂಭಕ್ಕೆ ರಸ್ತೆಗಿಳಿಯುವ ನಿರೀಕ್ಷೆಯಿದೆ. ಸಣ್ಣಕಾರು ಸೆಗ್ಮೆಂಟಿನಲ್ಲಿ ಹ್ಯುಂಡೈ ಎಚ್800 ಗ್ರಾಹಕರಿಗೆ ಇಷ್ಟವಾಗುವ ಭರವಸೆಯನ್ನು ಕಂಪನಿ ವ್ಯಕ್ತಪಡಿಸಿದೆ. ದರನೂ ಕಡಿಮೆ ಇರುವ ಕಾರಣ ಮಾರುತಿ ಆಲ್ಟೊ ಪಾಲಿಗೆ ಎಚ್800 ಕನ್ನಹಾಕುವುದರಲ್ಲಿ ಮಾತ್ರ ಸಂಶಯವಿಲ್ಲ. ಮಹೀಂದ್ರ ಕಂಪನಿ ಕೂಡ ಒಂದು ಸಣ್ಣಕಾರು ಹೊರತರಲಿದೆ. ಯಾವುದದು? ಮುಂದೆನೋಡಿ..


Click it and Unblock the Notifications








