ಮೈಕ್ರಾಕ್ಕಿಂತ ಅಗ್ಗದ ನಿಸ್ಸಾನ್ ಸಣ್ಣಕಾರು ಬೇಕಾ?

Nissan Small Car
ಶೀಘ್ರದಲ್ಲಿ ನಿರೀಕ್ಷಿಸಿ ಪಟ್ಟಿಯಲ್ಲಿ ನಿಸ್ಸಾನ್ ಗೂ ಸ್ಥಾನವಿದೆ. ಅಗ್ಗದ ಪುಟ್ಟಕಾರೊಂದನ್ನು ದೇಶದ ರಸ್ತೆಗೆ ಪರಿಚಯಿಸಲು ನಿಸ್ಸಾನ್ ಮೋಟರ್ ನಿರ್ಧರಿಸಿದೆ. ಇದನ್ನು ಚೆನ್ನೈನ ಘಟಕದಲ್ಲಿ ಉತ್ಪಾದಿಸಲಿದೆಯಂತೆ. ಇದೇ ಘಟಕದಲ್ಲಿ ನಿಸ್ಸಾನ್ ಮೈಕ್ರಾ ಮತ್ತು ಸನ್ನಿ ಸೆಡಾನ್ ಕಾರನ್ನು ಉತ್ಪಾದಿಸಲಾಗುತ್ತಿದೆ.

ಜಪಾನಿನ ಕಾರುತಯಾರಿಕಾ ಕಂಪನಿ ನೂತನ ಸಣ್ಣಕಾರು ನಿಸ್ಸಾನ್ ಮೈಕ್ರಾಕ್ಕಿಂತ ಅಗ್ಗವಿರಲಿದೆ ಎಂದು ಮೂಲಗಳು ಹೇಳಿವೆ. ದೇಶದ ಮಧ್ಯಮವರ್ಗದ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ನೂತನ ಕಾರನ್ನು ವಿನ್ಯಾಸ ಮಾಡುತ್ತಿದೆಯಂತೆ.

"ಭಾರತದ ಸಣ್ಣಕಾರು ಮಾರುಕಟ್ಟೆಯಲ್ಲಿ ಸಾಕಷ್ಟು ಅವಕಾಶವಿದೆ. ಹೀಗಾಗಿ ಮೈಕ್ರಾಕ್ಕಿಂತ ಅಗ್ಗದ ಕಾರೊಂದನ್ನು ಹೊರತರುವ ಕುರಿತು ನಾವು ಪ್ರಯತ್ನಿಸುತ್ತಿದ್ದೇವೆ" ಎಂದು ನಿಸ್ಸಾನ್ ಮೋಟರ್ ಇಂಡಿಯಾದ ಸಿಇಒ ಕಿಮಿನೊಡು ತೊಕುಯಮಾ ಹೇಳಿದ್ದಾರೆ.

ನೂತನ ಸಣ್ಣಕಾರು 2012ರಲ್ಲಿ ದೆಹಲಿಯಲ್ಲಿ ನಡೆಯಲಿರುವ ವಾಹನ ಪ್ರದರ್ಶನದಲ್ಲಿ ಅನಾವರಣಗೊಳ್ಳುವ ನಿರೀಕ್ಷೆಯಿದೆ. ಕಂಪನಿಯು ದೇಶದಲ್ಲಿ ತನ್ನ ಮಾರುಕಟ್ಟೆ ಪಾಲನ್ನು ಹೆಚ್ಚಿಸಿಕೊಳ್ಳಲು ಸಣ್ಣಕಾರೇ ಸೂಕ್ತ ಎಂದು ಬಲವಾಗಿ ನಂಬಿದೆಯಂತೆ. ಈಗಾಗಲೇ ನಿಸ್ಸಾನ್ ಮೈಕ್ರಾ ದೇಶದಲ್ಲಿ ಮೋಡಿಮಾಡಿರುವುದರಿಂದ ಕಂಪನಿಗೆ ಹುಮ್ಮಸ್ಸು ಹೆಚ್ಚಾಗಿದೆ ಎಂದು ತೊಕುಯಮಾ ಹೇಳಿದ್ದಾರೆ. ಮುಂದಿನ ಪುಟದಲ್ಲಿದೆ ಆಲ್ಟೋಗೆ ಫೈಟ್ ನೀಡಲು ಬರೋ ಕಾರು!!

More from DriveSpark

Article Published On: Monday, August 22, 2011, 14:35 [IST]
English summary
Nissan is another carmaker that wants to enter the entry level small car scene in India. Nissan which has a manufacturing plant in Chennai builds the Micra and Sunny sedan in India. The Japanese carmaker has sated it would unveil a new small car that would be priced lower than the Micra.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+