ಆಲ್ಟೊ ಬತ್ತಳಿಕೆಯಿಂದ ಹೊಸ ಮಾರುತಿ 800

Maruti's 800 Replacement
ಮಾರುತಿ ಸುಜುಕಿ ದೇಶದ ಮಾರುಕಟ್ಟೆಯಲ್ಲಿ ಈ ಸ್ಥಾನಕ್ಕೇರಲು ಮಾರುತಿ 800 ಕಾರಿನ ಕೊಡುಗೆಯನ್ನು ಮರೆಯುವಂತ್ತಿಲ್ಲ. ಐಕಾನಿಕ್ ಮಾರುತಿ 800 ಕುರಿತು ಜನರಿಗೆ ಈಗಲೂ ಮೋಹವಿದೆ. ಇದು ದೇಶದ ಸಣ್ಣಕಾರು ಮಾರುಕಟ್ಟೆಯನ್ನು ಸಮರ್ಥವಾಗಿ ವ್ಯಾಖ್ಯಾನ ಮಾಡಿದ ಕಾರು ಕೂಡ ಹೌದು.

ಆದರೆ ಮಾರುತಿ ಸುಜುಕಿ ನಂತರ ಆಲ್ಟೊ ಕಾರನ್ನು ಹೊರತಂದಿತ್ತು. ಮೊನ್ನೆ ಬೆಂಗಳೂರಿನಲ್ಲಿ ನೂತನ ಆಲ್ಟೊ ಕೂಡ ಬಿಡುಗಡೆಗೊಂಡಿದೆ. ಹೀಗೆ ಮಾರುತಿ 800 ಸ್ಥಾನವನ್ನು ಆಲ್ಟೊ ವಶಪಡಿಸಿಕೊಂಡಿತ್ತು. ಇದೀಗ ಆಲ್ಟೊ ಪ್ಲಾಟ್ ಫಾರ್ಮ್ ನಲ್ಲಿ ನೂತನ 800 ಕಾರೊಂದನ್ನು ಹೊರತರಲು ಮಾರುತಿ ನಿರ್ಧರಿಸಿದೆ.

ನೂತನ ಕಾರು 800 ಸಿಸಿ ಎಂಜಿನ್ ಹೊಂದಿರಲಿದೆ. ಆದರೆ ಕಾರ್ಯಕ್ಷಮತೆ ಮತ್ತು ಇಂಧನ ದಕ್ಷತೆ ವಿಷಯದಲ್ಲಿ ಹಳೆಯ ಮಾರುತಿ800ಗಿಂತ ಭಿನ್ನವಾಗಿರಲಿದೆ. ಬಹಳಷ್ಟು ತಿಂಗಳುಗಳ ಹಿಂದೆಯೇ ಮಾರುತಿ800 ಸ್ಥಾನಕ್ಕೆ ನೂತನ ಕಾರೊಂದು ಬರಲಿದೆ ಎಂದು ವರದಿಗಳು ಹೇಳುತ್ತಿದ್ದವು. ಆದರೆ ಕಂಪನಿ ಇಲ್ಲಿವರೆಗೆ ಇದನ್ನು ಅಧಿಕೃತವಾಗಿ ಪ್ರಕಟಿಸಿರಲಿಲ್ಲ.

ಆದರೆ ಮೊನ್ನೆ ಕಂಪನಿಯು 800ಸಿಸಿ ಎಂಜಿನ್ ನಿರ್ಮಿಸುವುದಾಗಿ ಹೇಳಿದಾಗ "800ಸಿಸಿ ಕಾರು" ಹೊರಬರುವುದು ಖಾತ್ರಿಯಾಗಿತ್ತು.

"ನೂತನ ಕಾರು ಸ್ವಿಫ್ಟ್ ಹ್ಯಾಚ್ ಬ್ಯಾಕ್ ಪ್ಲಾಟ್ ಫಾರ್ಮ್ ನಲ್ಲಿ ಹೊರಬರಲಿದೆ. ಆದರೆ ದರ ಆಲ್ಟೊಗಿಂತ ಹೆಚ್ಚಿರಲಿದೆ" ಎಂದು ಕಂಪನಿಯ ಹಿರಿಯ ಅಧಿಕಾರಿಯೊಬ್ಬರು ನೂತನ ಸ್ವಿಫ್ಟ್ ಬಿಡುಗಡೆ ಸಂದರ್ಭದಲ್ಲಿ ಹೇಳಿದ್ದರು. (ಬಳಸಿರುವುದು ಇಲ್ಯುಸ್ಟ್ರೇಷನ್ ಚಿತ್ರ)

ಮುಂದಿನ ಪುಟದಲ್ಲಿ ಸರತಿ ಸಾಲಿನಲ್ಲಿವೆ ಮೂರು ಕಾರುಗಳು...

More from DriveSpark

Article Published On: Monday, August 22, 2011, 14:47 [IST]
English summary
Maruti's 800 Replacement On Alto Platform. The carmaker is now all set to replace the M 800 with a new model that will also be powered by a 800cc engine, albeit better in terms of performance and fuel economy.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+