ಸರಣಿ: ರಸ್ತೆಗಿಳಿಯಲು ಸರತಿ ಸಾಲಿನಲ್ಲಿವೆ 4 ಸಣ್ಣಕಾರು

New Small Cars
ವಿಶ್ವದ ಬೃಹತ್ ಸಣ್ಣಕಾರು ಮಾರುಕಟ್ಟೆಯಾಗುವತ್ತ ಭಾರತ ದಾಪುಗಾಲಿಡುತ್ತಿದೆ. ದೇಶದ ಹೆಚ್ಚಿನ ಜನರು ಸಣ್ಣಕಾರು ಆಯ್ಕೆಮಾಡಿಕೊಳ್ಳಲು ಸಾಕಷ್ಟು ಕಾರಣಗಳಿವೆ. ಸರಾಸರಿ ಒಂದು ಸಾವಿರ ಭಾರತೀಯರಲ್ಲಿ ಕೇವಲ 12 ಮಂದಿ ಕಾರು ಹೊಂದಿದ್ದಾರೆ. ಅದರಲ್ಲಿ ಹೆಚ್ಚಿನವರು ಸಣ್ಣಕಾರು ಆಯ್ಕೆಮಾಡಿಕೊಳ್ಳುತ್ತಾರೆ.

ಭಾರತೀಯರು ಯಾವಾಗಲೂ ಮೈಲೇಜ್ ವಿಷ್ಯಕ್ಕೆ ಹೆಚ್ಚು ಒತ್ತುಕೊಡುತ್ತಾರೆ. ದೊಡ್ಡಕಾರುಗಳು ಸಹಜವಾಗಿ ಕಡಿಮೆ ಮೈಲೇಜ್ ಕೊಡುತ್ತವೆ. ದೇಶದಲ್ಲಿಂದು ಸಣ್ಣಕುಟುಂಬಗಳೇ ಹೆಚ್ಚಾಗುತ್ತದೆ. ಗಂಡಹೆಂಡತಿ ಮಗು ಅಥವಾ ಮಕ್ಕಳು ಹೊಂದಿರುವ ಕುಟುಂಬಕ್ಕೆ ನಾಲ್ಕು ಸೀಟಿನ ಸಣ್ಣಕಾರೇ ಸಾಕಾಗುತ್ತದೆ.

ಮತ್ತೆ ನಮ್ಮ ದೇಶದಲ್ಲಿ ಹೆಚ್ಚಿರುವ ಸಂಚಾರ ದಟ್ಟಣೆಯಲ್ಲೂ ಸಣ್ಣಕಾರೇ ಸವಾರಿಗೆ ಹೆಚ್ಚು ಸೂಕ್ತವಾಗಿದೆ. ಮೊದಲ ಕಾರು ಖರೀದಿಸುವರು ಹೆಚ್ಚಾಗಿ ಸಣ್ಣಕಾರನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ.

ಭಾರತದಲ್ಲಿ ಈಗಾಗಲೇ ಹಲವು ಸಣ್ಣಕಾರುಗಳು ಪ್ರಾಬಲ್ಯ ಪಡೆದಿವೆ. ಮಾರುತಿ ಸುಜುಕಿ ಆಲ್ಟೊ, ವ್ಯಾಗನಾರ್, ಹ್ಯುಂಡೈ ಸ್ಯಾಂಟ್ರೊ, ಐ10, ಫೋರ್ಡ್ ಫಿಗೊ, ಟಾಟಾ ನ್ಯಾನೊ, ಷೆವರ್ಲೆ ಬೀಟ್, ಟೊಯೊಟಾ ಎಟಿಯೋಸ್ ಲಿವಾ ಮುಂತಾದ ಕಾರುಗಳು ಹೆಚ್ಚು ಜನಪ್ರಿಯವಾಗಿವೆ.

ಸದ್ಯ ಮಾರುಕಟ್ಟೆಯಲ್ಲಿ ಸಣ್ಣಕಾರಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಹೀಗಾಗಿ ಕಂಪನಿಗಳು ಸಣ್ಣಕಾರನ್ನು ಅಭಿವೃದ್ಧಿಪಡಿಸುವಲ್ಲಿ ಬ್ಯುಸಿಯಾಗಿವೆ. ಮುಂದಿನ ಕೆಲವು ದಿನಗಳಲ್ಲಿ, ಕೆಲವು ವಾರಗಳಲ್ಲಿ ಅಥವಾ ಕೆಲವು ತಿಂಗಳುಗಳಲ್ಲಿ ದೇಶದ ರಸ್ತೆಗಿಳಿಯಲು ಸರತಿ ಸಾಲಿನಲ್ಲಿ ನಾಲ್ಕು ಸಣ್ಣಕಾರುಗಳಿವೆ. ಆ ಕಾರುಗಳನ್ನು ನೋಡಲು ಮುಂದಿನ ಪುಟ ನೋಡಿ.

More from DriveSpark

Article Published On: Monday, August 22, 2011, 14:56 [IST]
English summary
India is by far the world's largest market for small cars. Car makers are constantly developing new models and small cars are take up a large chunk among new models. Just look at all the new small cars that will be launched in the Indian car market in the coming few days.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+