ನ್ಯಾನೊ: ಅಖಾಡಕ್ಕಿಳಿದ ರತನ್ ಟಾಟಾ

ಅಷ್ಟೇಅಲ್ಲ ಲಕ್ಕಿಡ್ರಾದಲ್ಲಿ ಪುಟ್ಟಕಾರು ನ್ಯಾನೊ ಗೆದ್ದ ವಿಜೇತರಿಗೆ ಸ್ವತಃ ತಾವೇ ಕಿಲಿಕೈ ಹಸ್ತಾಂತರಿಸಿದ್ದಾರೆ. ಉಕ್ಕಿನಿಂದ ಉಪ್ಪಿನ ಕ್ಷೇತ್ರದವರೆಗೂ ವ್ಯಾಪಿಸಿರುವ ಟಾಟಾ ಸಮೂಹದ ಅಧ್ಯಕ್ಷರೊಂದಿಗಿನ ಮಾತುಕತೆ ಡೀಲರುಗಳಿಗೆ ಹರ್ಷ ನೀಡಿದೆಯಂತೆ.
ಡೀಲರ್ ಗಳೊಂದಿಗಿನ ಮುಖಾಮುಖಿಯಲ್ಲಿ ನ್ಯಾನೊ ಮಾರಾಟ ಹೆಚ್ಚಿಸಲು ಹಲವು ಸಲಹೆಗಳನ್ನು ರತನ್ ಟಾಟಾ ನೀಡಿದ್ದಾರೆ. ನ್ಯಾನೊ ಮಾರಾಟ ಹೆಚ್ಚಿಸಲು ಯಾವ ಐಡಿಯಾ ಮಾಡಿದರೂ ಬೆಂಬಲ ನೀಡುವುದಾಗಿ ರತನ್ ಟಾಟಾ ಡೀಲರ್ ಗಳಿಗೆ ಭರವಸೆ ನೀಡಿದ್ದಾರಂತೆ.
ರತನ್ ಟಾಟಾ ಅವರ ಕನಸಿನ ಕೂಸು ನ್ಯಾನೊ ಕಾರಿನ ಮಾರಾಟ ಆಶಾದಾಯಕವಾಗಿಯೇನೂ ಇಲ್ಲ. ಕಂಪನಿಯು ಶ್ರೀಲಂಕಾ, ನೇಪಾಳ ಸೇರಿದಂತೆ ವಿದೇಶಿ ಮಾರುಕಟ್ಟೆಯಲ್ಲೂ ಸಣ್ಣಕಾರನ್ನು ಮಾರಾಟ ಮಾಡುತ್ತಿದೆ. ದೇಶದ ಸಣ್ಣನಗರಗಳಲ್ಲಿ ಕೇವಲ ನ್ಯಾನೊ ಮಾರಾಟಕ್ಕಾಗಿ ಡೀಲರುಗಳ ಹುಡುಕಾಟದಲ್ಲಿರುವುದಾಗಿ ಕಂಪನಿ ಹೇಳಿದೆ.


Click it and Unblock the Notifications








