ಮಹೀಂದ್ರ ಹೊಸ ಸ್ಕಾರ್ಪಿಯೊ ಇಎಕ್ಸ್ ರಸ್ತೆಗೆ

ಧರ್ಮಸ್ಥಳಕ್ಕೋ, ತಿರುಪತಿಗೋ, ಸಂಬಂಧಿಗಳ ಮನೆಯಲ್ಲಿ ನಡೆಯುವ ಮದುವೆ, ಮಂಜಿ ಕಾರ್ಯಕ್ರಮಕ್ಕೋ ಹೋಗಬೇಕೆಂದರೆ ತುಸು ದೊಡ್ಡ ಕಾರೇ ಬೇಕು.
ದೊಡ್ಡ ಕಾರು ಬೇಕು ನಿಜ. ಆದರೆ ಹತ್ತಿಪ್ಪತ್ತು ಲಕ್ಷ ರು. ಕೊಟ್ಟು ಹೆಚ್ಚಿನವರು ದೊಡ್ಡ ಕಾರು ಖರೀದಿಸಲು ಇಚ್ಚಿಸುವುದಿಲ್ಲ. ದೊಡ್ಡಕುಟುಂಬ ಸವಾರಿಗೆ, ಅಥವಾ ಟ್ರಾವೆಲ್ ಬಾಡಿಗೆ ನೀಡಲು ಹೆಚ್ಚಿನವರು ಸ್ಕಾರ್ಪಿಯೊ ಕಾರುಗಳನ್ನು ಖರೀದಿಸುತ್ತಾರೆ.
ಇದೀಗ ಸ್ಕಾರ್ಪಿಯೊ ಫ್ಯಾಮಿಲಿಗೆ ಹೊಸದೊಂದು ಕಾರು ಆಗಮಿಸಿದೆ. ಅದನ್ನು ನಿಮ್ಮ ದೊಡ್ಡ ಫ್ಯಾಮಿಲಿ ಸವಾರಿಗೆ ಆಯ್ಕೆ ಮಾಡಿಕೊಳ್ಳಬಹುದು. ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯು ನೂತನ ಎಂಟ್ರಿ ಲೆವೆಲ್ ಸ್ಕಾರ್ಪಿಯೊ ಇಎಕ್ಸ್ ಎಸ್ ಯುವಿ ಕಾರನ್ನು ಹೊರತಂದಿದೆ. ಇದರ ದರ 7.53 ಲಕ್ಷ ರು.ನಿಂದ ಆರಂಭವಾಗುತ್ತದೆ.
ನೂತನ ಸ್ಕಾರ್ಪಿಯೊ 75 ಅಶ್ವಶಕ್ತಿಯ m2DiCR ಎಂಜಿನ್ ಹೊಂದಿದೆ. ಈ ಕಾರು ಹೆಚ್ಚು ಇಂಧನ ದಕ್ಷತೆ ಮತ್ತು ಕಾರ್ಯಕ್ಷಮತೆ ಹೊಂದಿರುವುದಾಗಿ ಕಂಪನಿ ಹೇಳಿದೆ. ದಕ್ಷತೆ ಹೆಚ್ಚಿಸುವ ಮೈಕ್ರೊ ಹೈಬ್ರಿಡ್ ತಂತ್ರಜ್ಞಾನ ಕೂಡ ನೂತನ ಕಾರಿನಲ್ಲಿದೆ.
ಮೈಕ್ರೊ ಹೈಬ್ರಿಡ್ ತಂತ್ರಜ್ಞಾನವೂ ಅನಗತ್ಯ ಇಂಧನ ವ್ಯರ್ಥವಾಗುವುದನ್ನು ತಡೆಯುತ್ತದೆ. ಕಾರು ನಿಲ್ಲಿಸಿರುವಾಗ, ಟ್ರಾಫಿಕ್ ಸಮಯದಲ್ಲಿ ಎಂಜಿನ್ ತನ್ನಷ್ಟಕ್ಕೆ ಆಫ್ ಆಗುತ್ತದೆ. ನೂತನ ಸ್ಕಾರ್ಪಿಯಿ ಪ್ರತಿಲೀಟರ್ ಇಂಧನಕ್ಕೆ 14 ಕಿ.ಮೀ. ಮೈಲೇಜ್ ನೀಡುತ್ತದೆ.
ನೂತನ ಸ್ಕಾರ್ಪಿಯೊ ಭಾರತ್ ಸ್ಟೇಜ್ IV ಆವೃತ್ತಿಯಾಗಿದೆ. ಇದರರ್ಥ ಈ ಕಾರು ಕಡಿಮೆ ಇಂಗಾಲ ಹೊರಸೂಸುವ ಬಂಡಿಯಾಗಿದ್ದು ಹೆಚ್ಚು ಪರಿಸರ ಸ್ನೇಹಿಯಾಗಿದೆ.
ನೂತನ ಕಾರಿನಲ್ಲಿ ಕೇವಲ 11.2 ಸೆಕೆಂಡಿನಲ್ಲಿ ಗಂಟೆಗೆ 60 ಕಿ.ಮಿ. ವೇಗ ಪಡೆದುಕೊಳ್ಳಬಹುದಾಗಿದೆ. ಕಂಪನಿಯು ಈ ಹಿಂದೆ ಅಗ್ಗದ ಸ್ಕಾರ್ಪಿಯೊ ಹೊರತರುವುದಾಗಿ ಹೇಳಿದ್ದನ್ನು ನೆನಪಿಸಿಕೊಳ್ಳಬಹುದು.


Click it and Unblock the Notifications








