ಮೂರುಮುಕ್ಕಾಲು ಲಕ್ಷ ರು.ನ ಟಾಟಾ ವಿಸ್ಟಾ ರಸ್ತೆಗೆ

New Tata Vista 2011 launched
ಟಾಟಾ ಮೋಟರ್ಸ್ ಕಂಪನಿಯ ಪ್ರೀಮಿಯಂ ಹ್ಯಾಚ್ ಬ್ಯಾಕ್ ಕಾರು "ವಿಸ್ಟಾ"ದ ನೂತನ ಆವೃತ್ತಿಯೊಂದನ್ನು ಅನಾವರಣ ಮಾಡಿದೆ. ನೂತನ ವಿಸ್ಟಾ ಶಕ್ತಿಶಾಲಿ ಎಂಜಿನ್, ಆಕರ್ಷಕ ವಿನ್ಯಾಸ, ಅನನ್ಯ ಫೀಚರ್ ಗಳು ಮತ್ತು ಇಂಟಿರಿಯರ್ ಸ್ಥಳಾವಕಾಶಗಳಿಂದ ಸೆಡಾನ್ ಕಾರಿನ ಅನುಭವ ನೀಡಲಿದೆ ಎಂದು ಟಾಟಾ ಮೋಟರ್ಸ್ ಹೇಳಿದೆ.

ನೂತನ ವಿಸ್ಟಾ ಕಾರುಗಳು ಸೆಪ್ಟಂಬರ್ ಒಂದರಿಂದ ಶೋರೂಂಗಳಲ್ಲಿ ದೊರಕಲಿವೆ. ನೂತನ ಕಾರಿನ ಮುಂಭಾಗದಲ್ಲಿ ಹೊಳೆಯುವ ಗ್ರಿಲ್, ಟ್ರಿಪಲ್ ಬ್ಯಾರೆಲ್ ನ ಹೆಡ್ ಲ್ಯಾಂಪ್ ಇತ್ಯಾದಿ ಹೊಸ ಫೀಚರ್ ಗಳು ಮೊದಲ ನೋಟಕ್ಕೆ ಸೆಳೆಯುತ್ತವೆ.

ನೂತನ ಟಾಟಾ ವಿಸ್ಟಾ ಸಫೈರ್ ಪೆಟ್ರೊಲ್ ಆವೃತ್ತಿ ದರ 3.88 ಲಕ್ಷ ರು.ನಿಂದ ಆರಂಭವಾಗುತ್ತದೆ. ಕ್ಯೂಡ್ರಾಜೆಟ್ ಡೀಸಲ್ ಎಂಜಿನ್ ಆವೃತ್ತಿ ದರ 4.79 ಲಕ್ಷ ರು.ನಿಂದ ಆರಂಭವಾಗುತ್ತದೆ. ಇವೆರಡು ದೆಹಲಿ ಎಕ್ಸ್ ಶೋರೂಂ ದರಗಳಾಗಿವೆ.

ಟಾಟಾ ವಿಸ್ಟಾ ಡೀಸೆಲ್ ಆವೃತ್ತಿಯು 1.3 ಲೀಟರಿನ ಕಾಮನ್ ರೈಲ್ ಡೈರೆಕ್ಟ್ ಇಂಜೆಕ್ಷನ್ ಕ್ಯೂಡ್ರಾಜೆಟ್ ಎಂಜಿನ್ ಹೊಂದಿದೆ. ಪೆಟ್ರೊಲ್ ಆವೃತ್ತಿಯು 1.4 ಲೀಟರಿನ ಎಂಪಿಎಫ್ಐ ಸಫೈರ್ ಪೆಟ್ರೊಲ್ ಎಂಜಿನ್ ಹೊಂದಿದೆ. ಇದರಲ್ಲಿ ಡೀಸೆಲ್ ಎಂಜಿನ್ 4 ಸಾವಿರ ಆರ್ ಪಿಎಂಗೆ 75 ಹಾರ್ಸ್ ಪವರ್ ನೀಡುತ್ತದೆ. ಪೆಟ್ರೊಲ್ ಆವೃತ್ತಿಯು 6 ಸಾವಿರ ಆರ್ ಪಿಎಂಗೆ 90 ಹಾರ್ಸ್ ಪವರ್ ನೀಡುತ್ತದೆ.

ನೂತನ ವಿಸ್ಟಾ ಮೈಲೇಜ್ ಪ್ರತಿಲೀಟರ್ ಡೀಸೆಲ್ ಗೆ 22.3 ಕಿ.ಮೀ. ಮತ್ತು ಪ್ರತಿಲೀಟರ್ ಪೆಟ್ರೊಲ್ ಗೆ 16.7 ಕಿ.ಮೀ. ಆಗಿದೆ. ಇವೆರಡರಲ್ಲಿ ಯಾವೆಲ್ಲ ಫೀಚರ್ ಗಳಿವೆ. ನೂತನ ವಿಸ್ಟಾ ವಿಶೇಷ ಏನು ಎಂಬುದನ್ನು ತಿಳಿದುಕೊಳ್ಳಲು next ಕ್ಲಿಕ್ ಮಾಡಿ.

More from DriveSpark

Article Published On: Wednesday, August 24, 2011, 11:28 [IST]
English summary
Tata Motors launched latest version of the Vista premium hatchback. The new Tata Vista gets a starting price of Rs. 3.88 lakhs (ex-showroom Delhi). The new Tata Vista delivers a mileage of 22.3 kmpl for diesel and 16.7 kmpl for petrol.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+