ಡೀಲರೆಂದರೆ ಡೇಂಜರಪ್ಪೋ ಹುಷಾರಾಗಿರಿ!

ಡೀಲರ್ ಗಳು ಅಥವಾ ಸೇಲ್ಸ್ ಮ್ಯಾನ್ ಗಳು ಅವರ ಬಳಿಯಿರುವ ವಾಹನ ಖರೀದಿಸುವಂತೆ ಮಾಡಲು ತಮ್ಮಲ್ಲಿರುವ ಎಲ್ಲ ಅಸ್ತ್ರಗಳನ್ನು ಪ್ರಯೋಗಿಸುತ್ತಾರೆ. ಅವರ ಮಾತಿನ ಮೋಡಿಗೆ ಸಿಲುಕಿ ಅಥವಾ ಅಜ್ಞಾನದಿಂದ ಸರಿಯಾದ ಡೀಲ್ ಮಾಡಲಾಗದಿರುವ ಸಾಧ್ಯತೆಯಿದೆ. ಡೀಲರ್ ಗಳನ್ನು ಎಚ್ಚರಿಕೆಯಿಂದ ಮ್ಯಾನೆಜ್ ಮಾಡುವ ಅಗತ್ಯವಿದೆ.
ಕಾರು ಖರೀದಿಸುವಾಗ ಡೀಲರ್ ಗಳೊಂದಿಗೆ ಕಠಿಣವಾಗಿ ವರ್ತಿಸಿ. ಯಾಕೆಂದರೆ..
ಕೆಲವು ಸೇಲ್ಸ್ ಮ್ಯಾನ್ ನಿಮ್ಮಲ್ಲಿ ಖಂಡಿತಾ ಈ ಮಾತು ಹೇಳುತ್ತಾರೆ. ಸಾರ್ ನಾನು ಈ ಉದ್ಯೋಗಕ್ಕೆ ಹೊಸದಾಗಿ ಸೇರಿದ್ದೀನಿ. ಇದು ಟ್ರೈನಿಂಗ್ ಅವಧಿ. ಈ ಸಂದರ್ಭದಲ್ಲಿ ನಾವು ಇಷ್ಟು ವಾಹನ ಮಾರಾಟ ಮಾಡಿದರೆ ಉದ್ಯೋಗ ಪರ್ಮನೆಂಟ್ ಆಗುತ್ತದೆ ಎಂದೆಲ್ಲ ಹೇಳುತ್ತಾರೆ.
ಮೇಲೆ ತಿಳಿಸಿದಂತಹ ವಂಚಕರಿಂದ ಪಾರಾಗುವುದು ಅತ್ಯಂತ ಮುಖ್ಯ. ಅದೇ ಸೇಲ್ಸ್ ಮ್ಯಾನ್ ನ್ಲಲಿ ನೀವು ಕೇಳಿ. ನನಗೆ ಹೆಚ್ಚು ಅನುಭವಿಗಳು ಬೇಕು. ನಿನಗೆ ಗೊತ್ತಿದ್ದರೆ ತಿಳಿಸು ಅಂತ ಹೇಳಿನೋಡಿ. ಆಗ ಅವನ ಪಾತ್ರ ಬದಲಾಗುತ್ತದೆ. ಅವನು ಚೆನ್ನಾಗಿ ಗೊತ್ತಿರುವವರ ತರಹ ನಟನೆ ಮಾಡುತ್ತಾನೆ.
ಹೆಚ್ಚಿನ ಡೀಲರ್ ಗಳು ಉತ್ತಮ ಮಾತುಗಾರರಾಗಿರುತ್ತಾರೆ. ಮಾತಿನಲ್ಲಿಯೇ ಮದುವೆ ಮಾಡಿಬಿಡುತ್ತಾರೆ. ಕೆಲವು ಡೀಲರ್ ಗಳು ನೀವು ಕೇಳಿದ ಪ್ರಶ್ನೆಗೆ ಸರಿಯಾಗಿ ಉತ್ತರಿಸದೇ ಯಾವುದೋ ಯಾವುದೋ ಪುರಾಣ ಮಾತನಾಡಿ ದೊಡ್ಡ ಪ್ರಶ್ನೆಯಾಗುತ್ತಾರೆ.
ನೀವು ಅವರ ಮೋಡಿಗೆ ಬೀಳದೆ ನೀವು ಕೇಳಿದ ಎಲ್ಲ ಪ್ರಶ್ನೆಗೆ ಸರಿಯಾಗಿ ಆತನಿಂದ ಉತ್ತರಿಸುವಂತೆ ನೋಡಿಕೊಳ್ಳಿ. ನಿಮಗೆ ಅಗತ್ಯವಿಲ್ಲದನ್ನು ಆತ ಮಾತನಾಡಿದರೆ ನೇರವಾಗಿ ಹೇಳಿ. ನಾನು ಕೇಳಿದ ಪ್ರಶ್ನೆಗೆ ಉತ್ತರ ಇದಲ್ಲ ಅಂತ.
ಡೀಲರ್ ಗಳೊಂದಿಗೆ ಡೀಲ್ ಹೀಗಿರಲಿ
* ಟೆಸ್ಟ್ ಡ್ರೈವ್ ಮಾಡಿ. ಆದರೆ ದರದ ಕುರಿತು ಆರಂಭದಲ್ಲಿ ಮಾತನಾಡಬೇಡಿ.
* ನೀವು ಮಾರುಕಟ್ಟೆಯಲ್ಲಿರುವ ವಿವಿಧ ವಾಹನಗಳ ಬಗ್ಗೆ ತಿಳುವಳಿಕೆ ಉಳ್ಳವರೆಂದು ಸೇಲ್ಸ್ ಮ್ಯಾನ್ ಗೆ ಗೊತ್ತಿದೆ. . ಒಬ್ಬ ಉತ್ತಮ ಸೇಲ್ಸ್ ಮ್ಯಾನ್ ತನ್ನಲ್ಲಿರುವ ಕಾರ್ ಖರೀದಿಸುವುದರಿಂದ ಆಗುವ ಲಾಭವನ್ನು ನಿಮಗೆ ಮನವರಿಕೆ ಮಾಡಲು ಇಷ್ಟಪಡುತ್ತಾರೆ.
* ಡೀಲರ್ ನಿಮ್ಮಲ್ಲಿ ಹೇಳಿದ ವಿಷಯದ ಕುರಿತು ಆತುರದಿಂದ ನಿರ್ಧಾರ ತೆಗೆದುಕೊಳ್ಳಬೇಡಿ. ಆತುರ ಪಟ್ಟರೆ ಅಪಾಯ ಖಂಡಿತ. ಎಚ್ಚರಿಕೆಯಿಂದ ಡೀಲ್ ಮಾಡಿ.
* ಕೆಟ್ಟ ಡೀಲರೊಬ್ಬನ ಮಾತಿನ ಮೋಡಿಗೆ ಸಿಲುಕಿ, ಕೆಟ್ಟ ಗಾಡಿ ಖರೀದಿಸಿದ ಭೂಪ ನೀವಾಗಬೇಡಿ.
ಓದಿ: ಕಾರಿನ ಮೈಲೇಜ್ ಹೆಚ್ಚಿಸಲು ಹದಿನೇಳು ಸಲಹೆ


Click it and Unblock the Notifications








