ಶೀಘ್ರದಲ್ಲಿ ಐಕಾನಿಕ್ "ಮಿನಿ" ಕಾರು ಭಾರತದ ರಸ್ತೆಗೆ

"ಕೆಲವೇ ವರ್ಷದಲ್ಲಿ ಮಿನಿ ಕಾರುಗಳನ್ನು ಭಾರತಕ್ಕೆ ಪರಿಚಯಿಸಲು ನಿರ್ಧರಿಸಿದ್ದೇವೆ. ಮಿನಿ ಬ್ರಾಂಡ್ ಕಾರುಗಳು 2-3 ವರ್ಷದಲ್ಲಿ ಭಾರತದಲ್ಲಿ ಇರಲಿವೆ" ಎಂದು ಬಿಎಂಡಬ್ಲ್ಯು ಅಧ್ಯಕ್ಷರಾದ ಆಂಡ್ರೆಸ್ ಸ್ಕಾಫ್ ಹೇಳಿದ್ದಾರೆ.
ಮಿನಿ ಸಣ್ಣಕಾರಾದರೂ ಅದರ ದರ ದೊಡ್ಡದಾಗಿರುವುದನ್ನು ಸ್ಕಾಫ್ ಸ್ಪಷ್ಟಪಡಿಸಿದ್ದಾರೆ. "ಆದರೆ ಮಿನಿಕಾರುಗಳು ಅಗ್ಗದ ಕಾರುಗಳಲ್ಲ. ಇದು ದುಬಾರಿ ಸಣ್ಣಕಾರುಗಳಾಗಿವೆ" ಎಂದು ಅವರು ಹೇಳಿದ್ದಾರೆ.
ಮಿನಿ ಕಾರುಗಳನ್ನು ಪರಿಚಯಿಸುವ ಮುನ್ನ ಕಂಪನಿಯು ಭಾರತದಲ್ಲಿ ಸಾಕಷ್ಟು ಹೂಡಿಕೆ ಮಾಡಲು ನಿರ್ಧರಿಸಿದೆ. ಯಾಕೆಂದರೆ ಮಿನಿಕಾರುಗಳನ್ನು ಆಮದುಮಾಡಿಕೊಂಡರೆ ಇಲ್ಲಿನ ಅತ್ಯಧಿಕ ಆಮದು ಸುಂಕದಿಂದಾಗಿ ದರ ಇನ್ನಷ್ಟು ದುಬಾರಿಯಾಗಲಿದೆ. ಹೀಗಾಗಿ ಬಿಎಂಡಬ್ಲ್ಯು ಪ್ರತ್ಯೇಕ ಉತ್ಪಾದನಾ ಘಟಕವನ್ನು ಭಾರತದಲ್ಲಿ ತೆರೆಯಲು ನಿರ್ಧರಿಸಿದೆ.
ಸದ್ಯ ಮಿನಿ ಕಂಪನಿಯ ಐದು ಕಾರುಗಳು ರಸ್ತೆಗಿಳಿಯಲು ಸಿದ್ಧವಾಗಿವೆ. ಮಿನಿ ಹ್ಯಾಚ್, ಕನ್ವರ್ಟಿಬಲ್, ಕ್ಲೂಬ್ ಮ್ಯಾನ್, ಕಂಟ್ರಿಮ್ಯಾನ್ ಮತ್ತು ಜಾನ್ ಕೂಪರ್ ವರ್ಕ್ಸ್ ಕಾರುಗಳು ರಸ್ತೆಗಿಳಿಯಲಿವೆ.


Click it and Unblock the Notifications








