ಮರ್ಸಿಡಿಸ್ ಪ್ಲಾಟ್ ಫಾರ್ಮ್ ನಲ್ಲಿ ಫೋರ್ಸ್ ಕಾರು

ಡೈಮ್ಲಾರ್ ಎಂಬುದು ಮರ್ಸಿಡಿಸ್ ಮಾಲಿಕತ್ವದ ಕಂಪನಿಯಾಗಿದೆ. ಇದೀಗ ಫೋರ್ಸ್ ಮೋಟರ್ಸ್ ಮರ್ಸಿಡಿಸ್ ಫ್ಲಾಟ್ ಫಾರ್ಮ್ ನಲ್ಲಿ ನೂತನ ಕಾರುಗಳನ್ನು ಹೊರತರಲಿದೆ.
ಕಂಪನಿ ಇತ್ತೀಚೆಗೆ ಪರಿಚಯಿಸಿದ್ದು 2 ವೀಲ್ ಡ್ರೈವ್ ಫೋರ್ಸ್ ಒನ್ ಕಾರು. ಕಂಪನಿಯು ಶೀಘ್ರದಲ್ಲಿ ಫೋರ್ ವೀಲ್ ಡ್ರೈವ್ ನ ಎರಡು ಆವೃತ್ತಿಯನ್ನು ಪರಿಚಯಿಸಲಿದೆ. ಇದರಲ್ಲಿ ಒಂದು ಸ್ಪೋರ್ಟಿ, ಮತ್ತೊಂದು ಎಂಪಿವಿ ಕಾರಾಗಿರಲಿದೆ.
ವರದಿಯೊಂದರ ಪ್ರಕಾರ ಕಂಪನಿಯಯ ಮಲ್ಟಿ ಪರ್ಪೊಸ್ ವೆಹಿಕಲನ್ನು ಮರ್ಸಿಡಿಸ್ ಬೆಂಝ್ ಫ್ಲಾಟ್ ಫಾರ್ಮ್ ನಲ್ಲಿ ಹೊರತರಲಿದೆಯಂತೆ. ಡೈಮ್ಲಾರ್ ಮತ್ತು ಫೋರ್ಸ್ ಮೋಟರ್ಸ್ ಈ ಕುರಿತು ದೀರ್ಘಕಾಲದ ಒಪ್ಪಂದ ಮಾಡಿಕೊಂಡಿದೆ.
ಜರ್ಮನಿಯ ಮರ್ಸಿಡಿಸ್ ಬೆಂಝ್ ಕಂಪನಿಯು ಫೋರ್ಸ್ ಗೆ ತಾಂತ್ರಿಕ ನೆರವು ನೀಡಲಿದೆ. ಹೀಗಾಗಿ ಇನ್ನು ಮುಂದೆ ರಸ್ತೆಗಿಳಿಯಲಿರುವ ಫೋರ್ಸ್ ಕಾರುಗಳು ಮರ್ಸಿಡಿಸ್ ಬೆಂಝ್ ಕಮಾಲ್ ಹೊಂದಿರಲಿವೆ.


Click it and Unblock the Notifications








