ಭಾರತದಲ್ಲಿಯೇ ಜಿಎಂ ಶೇ. 95 ಬಿಡಿಭಾಗ ಉತ್ಪಾದನೆ

ಕಂಪನಿಯು ಸ್ಥಳೀಯ ಮಾರುಕಟ್ಟೆಯಿಂದ ಹೆಚ್ಚು ಬಿಡಿಭಾಗ ಮತ್ತು ಸಾಧನಗಳನ್ನು ಖರೀದಿಸುವ ಯೋಜನೆ ಹೊಂದಿದೆ ಎಂದು ಅಶ್ವನಿ ಮುಪಾಸನಿ ಹೇಳಿದ್ದಾರೆ. ಅವರು ಕಂಪನಿಯ ಜಾಗತಿಕ ಖರೀದಿ ಮತ್ತು ಪೂರೈಕೆ ಸರಪಣಿ ವಿಭಾಗದ ಉಪಾಧ್ಯಕ್ಷರಾಗಿದ್ದಾರೆ.
ಜನರಲ್ ಮೋಟರ್ಸ್ ಪ್ರಸಕ್ತ ಉತ್ಪಾದನೆ ಸಾಮರ್ಥ್ಯವನ್ನು 2014ರ ವೇಳೆಗೆ ಎರಡು ಪಟ್ಟು ಹೆಚ್ಚಿಸಲು ನಿರ್ಧರಿಸಿದೆ. ಸದ್ಯ ಕಂಪನಿಯು ವರ್ಷಕ್ಕೆ ಒಂದುವರೆ ಲಕ್ಷ ಕಾರುಗಳನ್ನು ಉತ್ಪಾದಿಸುತ್ತದೆ. ಇದನ್ನು ಇನ್ನೆರಡು ವರ್ಷಗಳಲ್ಲಿ 3 ಲಕ್ಷ ಯುನಿಟ್ ಗೆ ತಲುಪಿಸಲು ಯೋಜಿಸಿದೆ.
ವಾಹನ ಬಿಡಿಭಾಗಗಳನ್ನು ಆಮದು ಮಾಡಿಕೊಳ್ಳುವುದಕ್ಕಿಂತ ಸ್ಥಳೀಯ ಮಾರುಕಟ್ಟೆಯಿಂದ ಪಡೆಯುವುದು ಉತ್ತಮ. ಈಗಾಗಲೇ ಸ್ಥಳೀಯ ಬಿಡಿಭಾಗಗಳ ಮಾರುಕಟ್ಟೆಯಲ್ಲಿ ಬೇಡಿಕೆ ಏರಿಕೆ ಕಾಣುತ್ತದೆ" ಎಂದು FISME ಹೇಳಿದೆ.


Click it and Unblock the Notifications








