ಹೊಸ ಕಾರುಗಳೊಂದಿಗೆ ಮತ್ತೆ ಪ್ಯೂಜೊ ಸಿಟ್ರೊನ್

ಇಷ್ಟೇ ಅಲ್ಲದೇ ಕಂಪನಿಯು ಅಗ್ಗದ ಕಾರು ಸೆಗ್ಮೆಂಟ್ ಗೂ ಪ್ರವೇಶಿಸಲು ನಿರ್ಧರಿಸಿದೆ. ಈ ಕಂಪನಿಯು ದೇಶದಲ್ಲಿ ಫೋಕ್ಸ್ ವ್ಯಾಗನ್ ಅನುಸರಿಸಿದ ಹಾದಿಯನ್ನೇ ಅನುಸರಿಸುತ್ತಿದೆ ಎಂದೆನಿಸುತ್ತದೆ. ಯಾಕೆಂದರೆ ಫೋಕ್ಸ್ ವ್ಯಾಗನ್ ಕೂಡ ಪೊಲೊ ಮತ್ತು ವೆಂಟೊ ಕಾರುಗಳನ್ನು ಪರಿಚಯಿಸುವ ಮೊದಲು ಪ್ರೀಮಿಯಂ ಸೆಡಾನ್ ಕಾರನ್ನು ರಸ್ತೆಗೆ ಬಿಟ್ಟಿತ್ತು.
ಕಂಪನಿಯು ದೇಶದಲ್ಲಿ 2012ರಲ್ಲಿ ವಹಿವಾಟು ಆರಂಭಿಸಲಿದೆ. ಆರಂಭದಲ್ಲಿ ಪ್ರೀಮಿಯಂ ಕಾರು 508 ಹೊರತರಲಿದೆ. 508 ಕಾರಿನ ದರ 20 ಲಕ್ಷ ರು.ನಿಂದ 25 ಲಕ್ಷ ರು. ಆಸುಪಾಸಿನಲ್ಲಿರಲಿದೆ. ಈ ಕಾರು ಹೋಂಡಾ ಅಕಾರ್ಡ್, ಟೊಯೊಟಾ ಕ್ಯಾಮ್ರಿ, ನಿಸ್ಸಾನ್ ಟೀನಾ ಮತ್ತು ಸ್ಕೋಡಾ ಸೂಪರ್ಬ್ ಕಾರುಗಳಿಗೆ ಪೈಪೋಟಿ ನೀಡಲಿದೆ.
ಕಂಪನಿಯು ಐಷಾರಾಮಿ ಕಾರು ಮಾರುಕಟ್ಟೆಗೆ ಪ್ರವೇಶಿಸಿ ಬ್ರಾಂಡ್ ಇಮೇಜ್ ಸೃಷ್ಟಿಸಲು ಬಯಸಿದೆ. ನಂತರ ಸಣ್ಣ ಮತ್ತು ಹ್ಯಾಚ್ ಬ್ಯಾಕ್ ಮಾರುಕಟ್ಟೆಗೆ ಪ್ರವೇಶಿಸಲು ನಿರ್ಧರಿಸಿದೆ.
ಯುರೋಪ್ ಮಾರುಕಟ್ಟೆಯಲ್ಲಿ ಪ್ಯೂಜೊ ಕಂಪನಿಯು ಫೋಕ್ಸ್ ವ್ಯಾಗನ್ ಗೆ ಪೈಪೋಟಿ ನೀಡುತ್ತಿದೆ. ಇದೇ ಟ್ರೆಂಡ್ ಭಾರತದಲ್ಲೂ ಮುಂದುವರೆಯುವ ನಿರೀಕ್ಷೆಯಿದೆ. ಈಗಾಗಲೇ ಪ್ಯೂಜೊ ಕಂಪನಿಯು ರೆನಾಲ್ಟ್ ನೊಂದಿಗೆ ಸಹಭಾಗಿತ್ವ ಮಾಡಿಕೊಂಡಿದೆ.


Click it and Unblock the Notifications








