ಈ ಕಾರಿನ ವಯಸ್ಸು 107: ಇನ್ನೂ ರಿಪೇರಿ ಕಂಡಿಲ್ಲ

ಹೊಸ ಕಾರು ರಿಪೇರಿಗೆ ಎಷ್ಟು ದಿನದಲ್ಲಿ ಬರುತ್ತದೆ? ಕೆಲವು ಕಾರುಗಳು ಶೋರೂಂನಿಂದ ಮನೆ ತಲುಪುವ ವೇಳೆಗೆ ದುರಸ್ತಿಯಾಗಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಹಳೆಯ ವಾಹನವೊಂದು ಗಮನಸೆಳೆಯುತ್ತದೆ. ಇದರ ವಿಶೇಷತೆಯೇನೆಂದರೆ ಇದು ಕಳೆದ 107 ವರ್ಷಗಳಿಂದ ರಿಪೇರಿ ಕಂಡಿಲ್ಲ. ಈಗಲೂ ಅತ್ಯುತ್ತಮ ಕಂಡಿಷನ್ ನಲ್ಲಿದೆ.

ಕಾರಿನ ಹೆಸರು Wolseley 6. ನಿರ್ಮಿಸಿದ್ದು 1904ರಲ್ಲಿ. ಇದು ಒಂದು ಸಿಲಿಂಡರ್ ಎಂಜಿನ್ ವಾಹನವಾಗಿದ್ದು ಪ್ರತಿಗಂಟೆಗೆ ಗರಿಷ್ಠ 46 ಕಿ.ಮೀ. ವೇಗ ನೀಡುತ್ತದೆ. ಇತ್ತೀಚೆಗೆ ಇದನ್ನು ಇಂಗ್ಲೆಂಡ್ ವಾಹನ ಸಚಿವಾಲಯ ಪರೀಕ್ಷಿಸಿತ್ತು. ಈಗಲೂ ಉತ್ತಮ ಸ್ಥಿತಿಯಲ್ಲಿರುವುದನ್ನು ಒಪ್ಪಿಕೊಂಡಿದೆ ಎಂದು ಡೈಲಿ ಮೈಲ್ ವರದಿ ಮಾಡಿದೆ.

ಪ್ರತಿವರ್ಷ ವಾಹನ ಸುರಕ್ಷತೆ ಕುರಿತು ಇಂಗ್ಲೆಂಡ್ ವಾಹನ ಸಚಿವಾಲಯ ಪರೀಕ್ಷಿಸುತ್ತದೆ. ವಾಹನ ಸುರಕ್ಷತೆ, ಹೊರಸೂಸುವ ಇಂಧನ ಇತ್ಯಾದಿಗಳನ್ನೆಲ್ಲ ನೋಡುತ್ತದೆ. ಆದರೆ ಅಲ್ಲಿ ಹೆಚ್ಚಿನ ವಾಹನಗಳು ಮೂರು ವರ್ಷ ಹಳತಾದ ಕೂಡಲೇ ಟೆಸ್ಟ್ ನಲ್ಲಿ ಫೇಲ್ ಆಗೋದು ಹೆಚ್ಚು. ಆದರೆ ಈ ವಾಹನವಂತೆ 107 ವರ್ಷಗಳಿಂದಲೂ ಪಾಸಾಗುತ್ತಲೇ ಬಂದಿದೆ.

ಸದ್ಯ ಈ ಕಾರನ್ನು ಬ್ರಿಟನಿನ ಬ್ರಿನ್ ಕಾಸ್ಲಿ(65) ಹೊಂದಿದ್ದಾರೆ. 2004ರಲ್ಲಿ ಗ್ರೊಮೆಂಟ್ ಕೋರ್ನಿ ಎನ್ನುವರ ಬಳಿ ಖರೀದಿಸಿದ್ದರು. "ಈ ವಾಹನ ಇಲ್ಲಿವರೆಗೆ ಯಾವುದೇ ಡ್ಯಾಮೇಜ್ ಆಗಿಲ್ಲ. 107 ವರ್ಷವಾದರೂ ಇನ್ನೂ ಹೊಸ ವಾಹನದಂತೆ ಇದೆ" ಎಂದು ಕಾಸ್ಲಿ ಹೇಳುತ್ತಾರೆ. (ಚಿತ್ರದಲ್ಲಿರುವುದು ವೋಲೆಸ್ಲಿ 6 ಸಾಂದರ್ಭಿಕ ಚಿತ್ರ )

More from DriveSpark

Article Published On: Wednesday, August 31, 2011, 11:56 [IST]
English summary
Built in 1904, a two-seater Wolseley 6 is in packet condition and recently upheld a Ministry of Transport (MoT) test. This automobile hasn’t damaged down given 1904.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+