ಹೊಸ ರೆನಾಲ್ಟ್ ಕೊಲಿಯೊಸ್ ಕಾರು ಹೀಗಿದೆ ನೋಡಿ

Renault Koleos
ರೆನಾಲ್ಟ್ ಕೊಲಿಯೊಸ್ ದರ ಹೆಚ್ಚು ಅಂತ ತಲೆಮೇಲೆ ಕೈಯಿಡಬೇಕಿಲ್ಲ. ಯಾಕೆಂದರೆ ಇದರಲ್ಲಿರುವ ಫೀಚರುಗಳು, ಸುರಕ್ಷತಾ ಸಾಧನಗಳು ದರ ಹೆಚ್ಚಾಗಲು ಪ್ರಮುಖ ಕಾರಣ. ಫೀಚರ್ಸ್ ವಿಷ್ಯದಲ್ಲಿ ರಾಜಿಯಾಗದೇ ಕಂಪನಿ ಹೊರತಂದಿರುವ ಹೊಸ ಕಾರಿಗೆ ಹ್ಯಾಟ್ಸಪ್ ಅನ್ನಲೇಬೇಕು.

ಇದರಲ್ಲಿ ಕ್ರೂಸ್ ಕಂಟ್ರೊಲ್, ಪುಷ್ ಬಟನ್ ಸ್ಟಾರ್ಟ್, ಡ್ಯೂಯಲ್ ಝೋನ್ ಏರ್ ಕಂಡಿಷನ್ ಮತ್ತು ಹಿಂದಿನ ಭಾಗದಲ್ಲಿ ಏರ್ ಕಂಡಿಷನ್ ವೆಂಟ್ ಇದೆ. ಉಳಿದಂತೆ ಆಲ್ ವೀಲ್ ಡ್ರೈವ್ ಸಿಸ್ಟಮ್ ಇದರ ಪ್ರಮುಖ ಆಕರ್ಷಣೆಯಾಗಿದೆ.

ನೂತನ ರೆನಾಲ್ಟ್ ಕೊಲಿಯೊಸ್ ಕಾರಿನಲ್ಲಿ ಸಾಕಷ್ಟು ಸುರಕ್ಷತೆಯ ಫೀಚರುಗಳು ಇವೆ. ಅಂದರೆ ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್ ಯಾನೆ ಎಬಿಎಸ್, ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್ ಯಾನೆ ಇಬಿಡಿ, ಆರು ಏರ್ ಬ್ಯಾಗುಗಳು, ಹಿಲ್ ಕಂಟ್ರೊಲ್ ಮತ್ತು ಹಿಲ್ ಸ್ಟಾರ್ಟ್ ಅಸಿಸ್ಟ್ ಮುಂತಾದ ಸುರಕ್ಷತಾ ಫೀಚರುಗಳಿವೆ.

ಉಳಿದಂತೆ ಪಾರ್ಕಿಂಗ್ ಸೆನ್ಸಾರ್, ಕೀಲೆಸ್ಸ್ ಎಂಟ್ರಿ ಮತ್ತು ಬೋಸ್ ಸೌಂಡ್ ಸಿಸ್ಟಮ್ ಕಾರಿನ ಸ್ಟಾಂಡರ್ಡ್ ಹೆಚ್ಚಿಸಿವೆ. ನೂತನ ಕಾರಿನ ಬುಕ್ಕಿಂಗ್ ಇಂದೇ ಆರಂಭವಾಗಿದೆ. ಬುಕ್ಕಿಂಗ್ ಮಾಡಿದವರಿಗೆ ಹತ್ತು ದಿನಗಳಲ್ಲಿ ಈ ಕಾರನ್ನು ಡೆಲಿವರಿ ಮಾಡಲಾಗುತ್ತದೆ ಎಂದು ಕಂಪನಿ ಹೇಳಿದೆ. ಉಳಿದಂತೆ ಕಂಪನಿಯು 20 ಸಾವಿರ ಜರ್ನಿವರೆಗೆ ಉಚಿತ ಸರ್ವಿಸ್ ಮತ್ತು 80 ಸಾವಿರ ಕಿ.ಮೀ.ವರೆಗೆ ವಾರೆಂಟಿ ಒದಗಿಸುತ್ತದೆ.

ರೆನಾಲ್ಟ್ ಕೊಲಿಯೊಸ್ ಟೆಕ್ ಮಾಹಿತಿ
* 2.0 ಲೀಟರಿನ ಸಿಆರ್ ಡಿಐ ಎಂಜಿನ್
* ಎಂ9ಆರ್ 855 ಟರ್ಬೊಚಾರ್ಜ್ ಡ್ ಎಂಜಿನ್
* ಎಂಜಿನ್ ಡಿಸ್ ಪ್ಲೇಸ್ ಮೆಂಟ್ 1,995 ಸಿಸಿ
* 6 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್
* ಇಂಧನ ಟ್ಯಾಂಕ್ ಸಾಮರ್ಥ್ಯ 65 ಲೀಟರುಗಳು
* ಗರಿಷ್ಠ ವೇಗ: ಗಂಟೆಗೆ 180 ಕಿ.ಮೀ.

ಫೀಚರ್ಸ್
* ಚರ್ಮದ ಮೆತ್ತೆ ಹಾಸಿದ ಇಂಟಿರಿಯರ್
* ಕ್ರೂಸ್ ಕಂಟ್ರೊಲ್ ಸಿಸ್ಟಮ್
* ಎಲೆಕ್ಟ್ರಾನಿಕ್ ಸ್ಪೀಡ್ ಮೀಟರ್
* ಡ್ಯೂಯಲ್ ಝೋನ್ ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೊಲ್
* ಬಾಷ್ ಆಡಿಯೋ ಸಿಸ್ಟಮ್
* ಸೀಟಿನ ಹಿಂಭಾಗದಲ್ಲಿ ಟೇಬಲ್
* ಸ್ಟಾರ್ಟ್ ಸ್ಟಾಪ್ ಬಟನ್ ನೊಂದಿಗೆ ಸ್ಮಾರ್ಟ್ ಆಕ್ಸೆಸ್ ಕಾರ್ಡ್
* 6 ಹಂತದಲ್ಲಿ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟು
* ಬ್ಲೂಟೂಥ್ ಪ್ಲಗ್ ಮತ್ತು ಪ್ಲೇ ಫೀಚರ್
* ರೈನ್ ಸೆನ್ಸಿಂಗ್ ವೈಪರ್
* ಕತ್ತಲು ತಿಳಿದುಕೊಂಡು ಉರಿಯುವ ಹೆಡ್ ಲ್ಉಆಪ್
* ಇಬಿಡಿ ಮತ್ತು ಎಬಿಎಸ್
* 6 ಏರ್ ಬ್ಯಾಗ್ ಸೇರಿದಂತೆ ಸಾಕಷ್ಟು ಫೀಚರುಗಳಿವೆ.

More from DriveSpark

Article Published On: Thursday, September 8, 2011, 17:42 [IST]
English summary
Renault- Koleos Features And Specifications. Renault has substantiated the Koleos price tag with features such as Cruise Control, a push button start, dual zone air conditioning and rear AC vents.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+