ರೆನಾಲ್ಟ್ ಕೊಲಿಯೊಸ್ ರಸ್ತೆಗೆ, ದರವೆಷ್ಟು?

ಕೊಲಿಯಾಸ್ 2 ಲೀಟರಿನ ಕಾಮನ್ ರೈಲ್ ಟರ್ಬೊ ಡೀಸೆಲ್ ಡಿಸಿಐ ಎಂಜಿನ್ ಹೊಂದಿದೆ. ಇದು 6 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿದೆ. ಈ ಎಂಜಿನ್ 320 ಎನ್ ಎಂ ಟಾರ್ಕ್ ಗೆ 148 ಹಾರ್ಸ್ ಪವರ್ ನೀಡುತ್ತದೆ.
ದೇಶದ ಹೆದ್ದಾರಿಗಳಲ್ಲಿ ಇದರಲ್ಲಿ ಗಂಟೆಗೆ ಗರಿಷ್ಠ 180 ಕಿ.ಮೀ. ವೇಗದಲ್ಲಿ ಸಾಗಬಹುದಾಗಿದೆ. ಕ್ಷಮಿಸಿ ಇದು ದೇಶದಲ್ಲಿರುವ ಕೆಲವು ದುರ್ಗಮ ಹೆದ್ದಾರಿಗಳಿಗೆ ಅನ್ವಯವಾಗುವುದಿಲ್ಲ!
ರೆನಾಲ್ಟ್ ಕೊಲಿಯೊಸ್ ಎಸ್ ಯುವಿ ದರ 22.99 ಲಕ್ಷ ರುಪಾಯಿ. ಆದರೆ ಇದರ ಪ್ರತಿಸ್ಪರ್ಧಿ ಕಾರುಗಳಾದ ಟೊಯೊಟಾ ಫಾರ್ಚ್ಯುನರ್ ಗೆ ಹೋಲಿಸಿದರೆ ಇದು ದುಬಾರಿ ಎನಿಸುತ್ತದೆ. ಇದರರ್ಥವೆಂದರೆ ಕಂಪನಿಯು ಪ್ರತಿಸ್ಪರ್ಧಿಗಳೊಂದಿಗೆ ಜಿದ್ದಿಗೆ ಬಿದ್ದು ಮಾರಾಟ ಮಾಡಲು ಇಚ್ಚಿಸುವುದಿಲ್ಲ. ಕ್ರಾಸೊವರ್ ಮಾರುಕಟ್ಟೆಯಲ್ಲಿ ಬ್ರಾಂಡ್ ಇಮೇಜ್ ಸೃಷ್ಟಿಸುವುದೇ ಕಂಪನಿಯ ಮೊದಲ ಆದ್ಯತೆ ಎಂದೆನಿಸುತ್ತದೆ.
ಕೊಲಿಯೊಸ್ ಗೆಲುವು ಪಡೆಯಲು ಕಾರಣವಾಗುವ ಇನ್ನೊಂದು ವಿಷ್ಯವೆಂದರೆ ಕಂಪನಿಯ ಡೀಲರ್ಷಿಪ್ ಕೇಂದ್ರಗಳು. ಇದೀಗ ಕಂಪನಿಯು 14 ಡೀಲರ್ ಷಿಪ್ ಕೇಂದ್ರ ಹೊಂದಿದ್ದು, ಇದನ್ನು 40ಕ್ಕೆ ಹೆಚ್ಚಿಸಲು ಯೋಜಿಸಿದೆ.
ಕೊಲಿಯೊಸ್ ಅಂದ್ರೆ ಇಷ್ಟೇನಾ ಎಂದು ಕೇಳಬೇಡಿ. ಹೊಸ ಕಾರಿನ ಫೀಚರು, ಬೆಡಗು, ಬೆರಗು ತಿಳಿಯಲು ಮುಂದಿನ ಪುಟ ನೋಡಿ.


Click it and Unblock the Notifications








