ಫೋರ್ಸ್ ಮೋಟರ್ಸ್ ಟ್ರಾಕ್ಸ್ ಪರಿಷ್ಕೃತ ಆವೃತ್ತಿ

ಫೋರ್ಸ್ ಟ್ರಾಕ್ಸ್ ವಾಹನವನ್ನು ಪ್ರಮುಖವಾಗಿ ವಾಣಿಜ್ಯ ಉದ್ದೇಶಕ್ಕಾಗಿ ಬಳಸಲಾಗುತ್ತಿದೆ. ಆದರೆ ಕಂಪನಿಯು ಇದೀಗ ನೂತನ ಟ್ರಾಕ್ಸ್ ನ್ನು ಅತ್ಯುತ್ತಮ ವಿನ್ಯಾಸ ಮತ್ತು ಆರಾಮದಾಯಕತೆಯ ಫೀಚರುಗಳಿಂದ ಸಿಂಗರಿಸಲು ನಿರ್ಧರಿಸಿದೆ.
ಫೋರ್ಸ್ ಮೋಟರ್ಸ್ ಇತ್ತೀಚೆಗೆ ಫೋರ್ಸ್ ಒನ್ ಎಂಬ ಪ್ರೀಮಿಯಂ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ ಪರಿಚಯಿಸಿತ್ತು. ಇದು ಮರ್ಸಿಡಿಸ್ ಬೆಂಝ್ ಕಂಪನಿಯ 2.2 ಲೀಟರಿನ ಡೀಸೆಲ್ ಎಂಜಿನ್ ಹೊಂದಿದೆ.
ಫೋರ್ಸ್ ಒನ್ ಬೆನ್ನ ಹಿಂದೆ ಕಂಪನಿಯು ಮತ್ತೊಂದು ಪ್ರಯಾಣಿಕಾ ವಾಹನ ಹೊರತರಲು ನಿರ್ಧರಿಸಿದೆ. ಇದಕ್ಕೆ ನ್ಯೂ ಟ್ರಾಕ್ಸ್ ಎಂದು ಹೆಸರಿಡಲಿದೆ. ಟ್ರಾಕ್ಸ್ ಅಂದ್ರೆ ನಿಜಾರ್ಥದಲ್ಲಿ ಭಾರತೀಯರ ವಾಹನ. ಇದರಲ್ಲಿ ಹನ್ನೆರಡು ಜನರು ಆರಾಮವಾಗಿ ಕುಳಿತುಕೊಳ್ಳಬಹುದಾಗಿದೆ.


Click it and Unblock the Notifications








