ಸಲ್ಮಾನ್ ಖುರ್ಷಿದ್ ಗೆ ಇನ್ನೋವಾ ಸವಾರಿಯೇ ಖುಷಿ

ಸಲ್ಮಾನ್ ಖುರ್ಷಿದ್ ಬಳಿ 1999ರ ಮಹೀಂದ್ರ ಜೀಪ್, 2005ರ ಟೊಯೊಟಾ ಇನ್ನೋವಾ ಕಾರು ಮತ್ತು ಒಂದು ಮಲ್ಟಿ ಪರ್ಪೊಸ್ ವೆಹಿಕಲ್ ಇದೆ. ಇಷ್ಟೇ ಅಲ್ಲ ಅವರಲ್ಲಿ ಆಮದು ಮಾಡಿಕೊಂಡ ಹಳೆಯ ಕಾರೊಂದು ಇದೆಯಂತೆ.
ಇದರಲ್ಲಿ 2005ರ ಟೊಯೊಟಾ ಇನ್ನೋವಾದ ಕುರಿತು ನೋಡೋಣ. ಇದು ಕ್ವಾಲಿಸ್ ಬದಲಿಯಾಗಿ 2005ರಲ್ಲಿ ರಸ್ತೆಗಿಳಿದಿತ್ತು. ಇದು ವಿಶಾಲವಾದ ಇಂಟಿರಿಯರ್ ಹೊಂದಿದೆ. ಇದರ ಮುಂಭಾಗ ನೋಡಿದರೆ ಕ್ಯಾಮ್ರಿ ಮತ್ತು ನೂತನ ಎಟಿಯೋಸ್ ವಿನ್ಯಾಸವನ್ನು ಹೋಲುತ್ತದೆ.
ಈ ಇನ್ನೋವಾ ಕಾರು ಟ್ಯೂಬ್ ಲೆಸ್ ಟೈರ್ ಗಳನ್ನು ಹೊಂದಿವೆ. ಆದರೆ ಹೈಎಂಡ್ ಇನ್ನೋವ ಮಾತ್ರ ಅಲಾಯ್ ವೀಲ್ ಗಳನ್ನು ಹೊಂದಿವೆ. ಈ ಕಾರಿನ ಇಂಟಿರಿಯರ್ ಅತ್ಯಧಿಕ ಗುಣಮಟ್ಟದಾಗಿದೆ. ನೋಡಲು ಟೊಯೊಟಾ ಫಾರ್ಚ್ಯುನರ್ ಕಾರಿನಂತೆ ಇದೆ.
ಐಷಾರಾಮಿ ಗುಣಮಟ್ದ ಸ್ಟೇರಿಂಗ್ ವೀಲ್ ಮೆತ್ತನೆಯ ಚರ್ಮದ ಹಾಸಿನಿಂದ ಇಷ್ಟವಾಗುತ್ತದೆ. ಹೆಡ್ ಲೈಟ್ ಹೆಚ್ಚು ಪವರ್ ಫುಲ್ ಆಗಿದೆ. ಈ ಕಾರಿನಲ್ಲಿ ಬಹುಮಾಹಿತಿ ಡಿಸ್ ಪ್ಲೇ ಇದೆ. ಯುಎಸ್ ಬಿ, ಎಯುಎಕ್ಸ್ ಇನ್ ಪುಟ್, 6 ಸ್ಪೀಕರ್ ಸೌಲಭ್ಯದೊಂದಿಗೆ ಸಿಡಿ ಪ್ಲೇಯರ್ ಮತ್ತು ಆಟೋ ಕ್ಲೈಮೆಟ್ ಕಂಟ್ರೊಲ್ ಇದೆ.
ಇನ್ನೋವಾ ಡೀಸೆಲ್ ಎಂಜಿನ್ ಹೊಂದಿದೆ. ಜೊತೆಗೆ ಸಿಎನ್ ಜಿ ಆಯ್ಕೆಯಲ್ಲೂ ದೊರಕುತ್ತಿದೆ. ಡೀಸೆಲ್ ಎಂಜಿನ್ 2.5 ಲೀಟರ್, 4 ಸಿಲಿಂಡರ್ ಟರ್ಬೊ ಚಾರ್ಜ್ ಡ್, ಕಾಮನ್ ರೈಲ್ ಇಂಜೆಕ್ಷನ್ ಎಂಜಿನ್ ಹೊಂದಿದೆ. ಇನ್ನೋವಾ 5 ಸ್ಪೀಡಿನ ಗೇರ್ ಬಾಕ್ಸ್ ಹೊಂದಿದೆ.
ಇನ್ನೋವಾ ಯಶಸ್ಸು ಪಡೆಯಲು ಅದರ ದರ ಕೂಡ ಪ್ರಮುಖ ಕಾರಣವಾಗಿದೆ. ಇನ್ನೋವಾ ಕಾರುಗಳು ಸುಮಾರು 8.2 ಲಕ್ಷ ರು.ನಿಂದ 12.51 ಲಕ್ಷ ರು. ಆಸುಪಾಸಿನಲ್ಲಿ ದೊರಕುತ್ತದೆ.


Click it and Unblock the Notifications








