ನಂಬಿಸ್ವಾಮಿ ಸ್ವಿಫ್ಟ್ ಗಿಂತ ಟಾಟಾ ವಿಸ್ಟಾ ಬೆಸ್ಟ್

* ಆಕ್ಸ್ ಇನ್ ಮತ್ತು ಯುಎಸ್ ಬಿ ಪೋರ್ಟ್ ಇರುವ ಮ್ಯೂಸಿಕ್ ಸಿಸ್ಟಮ್
* 5 ಮೊಬೈಲ್ ಫೋನಿಗೆ ಸಂಪರ್ಕ ಸಾಧಿಸಬಲ್ಲ ಬ್ಲೂ5 ಬ್ಲೂಟೂಥ್
* ಸ್ಟೇರಿಂಗ್ ನಲ್ಲಿ ಆಡಿಯೋ ಕಂಟ್ರೊಲ್
* ಇಂಟಲಿಜೆಂಟ್ ರಿಯರ್ ವೈಪರ್
* ಎತ್ತರ ಹೊಂದಾಣಿಕೆ ಮಾಡಬಹುದಾದ ಚಾಲಕನ ಸೀಟು
ಟಾಟಾ ವಿಸ್ಟಾದಲ್ಲಿ ಸಾಕಷ್ಟು ಸುರಕ್ಷತೆಯ ಫೀಚರುಗಳೂ ಇವೆ. ಅಂದರೆ ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್, ಇಬಿಡಿ(ಎಲೆಕ್ಟ್ರಿಕ್ ಬ್ರೇಕ್ ಫೋರ್ಸ್ ವಿತರಣೆ) ಇತ್ಯಾದಿ ಸೇಫ್ಟಿ ಫೀಚರುಗಳಿವೆ.
ದರದ ವಿಷಯದಲ್ಲಿ ಇವೆರಡು ಕಾರುಗಳ ನಡುವೆ ಸಾಕಷ್ಟು ಭಿನ್ನತೆಗಳಿವೆ. ಎಂಟ್ರಿ ಲೆವೆಲ್ ವಿಸ್ಟಾ ಎಲ್ಎಸ್ ದರ ಸುಮಾರು 4,79, 915 ರುಪಾಯಿ. ಆದರೆ ಸ್ವಿಫ್ಟ್ ಎಲ್ ಡಿಐ ದರ ಸುಮಾರು 5,17,163 ರು. ಇದೆ.
ಇದರೊಂದಿಗೆ ವಿಸ್ಟಾದಲ್ಲೂ ಎರಡು ಮಧ್ಯಮ ಆವೃತ್ತಿಗಳಿವೆ. ಇವೆರಡರ ದರ ಕ್ರಮವಾಗಿ 5,28,850 ರುಪಾಯಿ ಮತ್ತು5,46,907 ರುಪಾಯಿ ಆಗಿದೆ. ಆದರೆ ಸ್ವಿಫ್ಟ್ ವಿಡಿಐ ದರ ಸುಮಾರು 5,60,662 ರುಪಾಯಿ. ವಿಸ್ಟಾದ ಟಾಪ್ ಎಂಡ್ ಆವೃತ್ತಿ ಝಡ್ಎಕ್ಸ್ ದರ 6,06,700 ರುಪಾಯಿ. ಆದರೆ ಸ್ವಿಫ್ಟ್ ಟಾಪ್ ಎಂಡ್ ಆವೃತ್ತಿ ದರ 6,37,904 ರು. ಅಂದರೆ ವಿಸ್ಟಾಕ್ಕಿಂತ ಸ್ವಿಫ್ಟ್ ದುಬಾರಿ ಎಂದಾಯಿತು.
ಇನ್ನು ಪ್ರಮುಖವಾದ ಒಂದು ವ್ಯತ್ಯಾಸವೆಂದರೆ ಇವೆರಡು ಕಾರುಗಳ ವೇಟಿಂಗ್ ಅವಧಿ ಕುರಿತಾದದ್ದು. ಸ್ವಿಫ್ಟ್ ಕಾರಿಗೆ 5-6 ತಿಂಗಳು ಕಾಯಬೇಕು. ಆದರೆ ವಿಸ್ಟಾಕ್ಕೆ ಒಂದು ತಿಂಗಳಿಗಿಂತ ಜಾಸ್ತಿ ಕಾಯೋ ಅಗತ್ಯವಿಲ್ಲ. ನಿಮಗೆ ಸ್ವಿಫ್ಟ್ ಇಷ್ಟವಾಯಿತೇ? ಅಥವಾ ವಿಸ್ಟಾ? ಆಯ್ಕೆ ನಿಮ್ಮದು.


Click it and Unblock the Notifications