ಬೆಂಗಳೂರು ಬೈಕ್ ಸ್ಟಂಟ್: ಅರೆರೇ ಏನಿದು?

Bike Stunt
ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಮೂರು ದಿನಗಳ "ರೆಲಿಯೊ ಕ್ವಿಕ್ ಆಟೋ ಮಾಲ್ 2011" ನಡೆಯುತ್ತಿದೆ. ಅದರಲ್ಲಿ ಬೈಕ್ ಸ್ಟಂಟ್ ವಿಶೇಷ ಆಕರ್ಷಣೆ. ಬೈಕ್ ಮೇಲೆ ಸವಾರ ಮಾಡುವ ಸ್ಟಂಟ್ ನಿಜಕ್ಕೂ ಮೈನವಿರೇಳಿಸುತ್ತದೆ. ಭಾನುವಾರ ಕೊನೆಗೊಳ್ಳುವ ಆಟೋಮಾಲ್ ಸ್ಟಂಟ್ ಗೆ ಸಮಯ ಸಿಕ್ಕರೆ ನೀವು ಹೋಗಿ ಬರಬಹುದು.

ಈ ಆಟೊ ಮಾಲ್ ನಿಮಗೆ ಇಷ್ಟವಾಗಬಹುದು. ಯಾಕೆಂದರೆ ಇಲ್ಲಿ ಒಂದು ಕಡೆ ಸುಂದರವಾದ ಕಾರುಗಳನ್ನು ನೋಡಬಹುದು. ಮತ್ತೊಂದು ಕಡೆ ಬೈಕ್ ಸ್ಟಂಟ್ ಹೃದಯದ ಮಿಡಿತವನ್ನು ಹೆಚ್ಚಿಸುತ್ತದೆ. ಮತ್ತೊಂದೆಡೆ ನಡೆಯುತ್ತಿರುವ ರೇಸ್, ಡ್ಯಾನ್ಸ್, ಬೈಕ್ ಸಾಹಸ ದೃಷ್ಯಗಳನ್ನು ನೋಡಬಹುದು.

ಬೈಕ್ ಸ್ಟಂಟ್ ನೋಡಿ. ಆದರೆ ಇದನ್ನು ಅನುಸರಿಸಬೇಡಿ ಎಂಬ ಎಚ್ಚರಿಕೆಯ ಮಾತನ್ನು ಪದೇಪದೇ ಹೇಳಲಾಗುತ್ತಿದೆ. ಪರಿಣತಿ ಪಡೆದರೆ ಮಾತ್ರ ಅಂತ ಸ್ಟಂಟ್ ಮಾಡಲು ಸಾಧ್ಯ. ಬೈಕ್ ಸ್ಟಂಟ್ ಮುಂಜಾನೆ ಹತ್ತು ಗಂಟೆಯಿಂದ ರಾತ್ರಿ 8 ಗಂಟೆಯ ತನಕ ನಡೆಯುತ್ತದೆ.

ಇಷ್ಟೇ ಅಲ್ಲದೇ ಈ ಆಟೋ ಮಾಲ್ 2011ನಲ್ಲಿ ಸಾಕಷ್ಟು ಕಾರು, ಬೈಕ್, ಜೀಪುಗಳನ್ನು ನೋಡಬಹುದು. ಜೊತೆಗೆ ಪರಿಸರ ಸ್ನೇಹಿ ವಾಹನಗಳ ಕುರಿತು ವಿಶೇಷ ವಿಭಾಗವೂ ಇಲ್ಲಿದೆ. ಆಟೋಮೊಬೈಲ್ಸ್ ಕ್ಷೇತ್ರದ ವಿದ್ಯಾರ್ಥಿಗಳಿಗೆ ವಾಹನ ವಿನ್ಯಾಸ ಮಾಡಲು ಇಲ್ಲಿ ಅವಕಾಶವಿದೆ. ಜೊತೆಗೆ ಇಲ್ಲಿ ಉದ್ಯೋಗಮೇಳವೂ ಇದೆ.

ಆದರೂ ಒಂದು ಸಂಶಯ ನಿಮಗಿರಬಹುದು. ಈ ಸುದ್ದಿಯಲ್ಲಿ ಬಳಸಿದ ಚಿತ್ರದಂತಹ ಬೈಕ್ ಪ್ಲಸ್ ಲಿಪ್ಸ್ ಸ್ಟಂಟ್ ಇದೆಯೇ ಎಂದು. ಕ್ಷಮಿಸಿ. ಅಂತ ಸ್ಟಂಟ್ ಸದ್ಯಕ್ಕೆ ನಡೆಯುತ್ತಿಲ್ಲ. ಇದು ಇಂಗ್ಲೆಂಡಿನಲ್ಲಿ ನಡೆದ ಬೈಕ್ ಸ್ಟಂಟ್ ದೃಷ್ಯವಾಗಿದೆ. ಇಲ್ಲಿ ಸಾಹಸ ದೃಷ್ಯದೊಂದಿಗೆ ಇಂತಹ ಪ್ರಣಯ ದೃಷ್ಯಗಳನ್ನೂ ನೋಡಬಹುದು. ನೋಡುಗರಿಗೆ ಡಬಲ್ ಧಮಾಕ.

More from DriveSpark

Article Published On: Saturday, September 17, 2011, 12:02 [IST]
English summary
The bike stunts at Relio Quick Auto Mall 2011 to be Started at Tripuravasini, Palace Grounds, Bangalore(Sept 6 to 18). Here is full report of Auto mall 2011.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+