ಚಿನ್ನದ ನ್ಯಾನೊ ಕಾರು: ದರ 22 ಕೋಟಿ ರು.

ಈ ನ್ಯಾನೊ ಕಾರಿಗೆ ಹಲವು ಬೆಲೆಬಾಳುವ ಮುತ್ತು, ರತ್ನಗಳನ್ನು ಅಳವಡಿಸಲಾಗಿದೆ. ಈ ಕಾರಿನ ಚಿನ್ನದ ವಿನ್ಯಾಸಕ್ಕಾಗಿ ಸುಮಾರು 22 ಅಕ್ಕಸಾಲಿಗರು ಕೆಲಸ ಮಾಡಿದ್ದಾರೆ. ಸುಮಾರು 80 ಕೆಜಿ ಚಿನ್ನ ಮತ್ತು 50 ಕೆಜಿ ಬೆಳ್ಳಿಯನ್ನು ನ್ಯಾನೊ ಕಾರಿನ ಹೊರ ವಿನ್ಯಾಸಕ್ಕಾಗಿ ಬಳಸಿಕೊಳ್ಳಲಾಗಿದೆ.
ಆದರೆ ಈ ನ್ಯಾನೊ ಕಾರನ್ನು ಮಾರಾಟ ಮಾಡಲಾಗುವುದಿಲ್ಲವಂತೆ. ನ್ಯಾನೊ ಕಾರಿನ ಮಾರಾಟವನ್ನು ಉತ್ತೇಜಿಸಲು ಇದನ್ನು ಬಳಸಿಕೊಳ್ಳುವ ನಿರೀಕ್ಷೆಯಿದೆ. ಇದಕ್ಕೂ ಮುನ್ನ ಟೈಟಾನ್ ಇಂಡಸ್ಟ್ರೀಸ್ ನ ಆಭರಣ ಬ್ರ್ಯಾಂಡ್ ಟಾಟಾ ಗೋಲ್ಡ್ ಪ್ಲಸ್ ಚಿನ್ನದ ನ್ಯಾನೊ ನಿರ್ಮಿಸಿತ್ತು.
ಕೆಲವು ವರ್ಷದ ಹಿಂದೆ ದುಬೈನ ಒಬ್ಬ ಶೇಖ್ ಚಿನ್ನದ ಮರ್ಸಿಡಿಸ್ ಬೆಂಝ್ ಎಸ್ ಕ್ಲಾಸ್ ನಿರ್ಮಿಸಿದ್ದ. ಮಧ್ಯಪ್ರಾಚ್ಯ ದೇಶದ ವ್ಯಕ್ತಿಯೊಬ್ಬ ಚಿನ್ನದ ಬುಗಾಟಿ ವೆರೋನ್ ಕಾರು ನಿರ್ಮಿಸಿದ್ದ.


Click it and Unblock the Notifications








