ನ್ಯಾನೊ ಬೆಂಕಿಗಾಹುತಿ, ಅಕ್ಕತಮ್ಮ ಪಾರು

ನಿನ್ನೆ ರಾತ್ರಿ ದೆಹಲಿ ಸಮೀಪದ ಕೃಷ್ಣ ನಗರ ನಿವಾಸಿಗಳಾದ ವಿದ್ಯಾರ್ಥಿ ನಿಶಾಂತ್(25) ಮತ್ತು ಆತನ ಅಕ್ಕ ಸುಮನ್(35) ಮನೆಗೆ ವಾಪಸ್ಸಾಗುವ ದಾರಿಯಲ್ಲಿ ಈ ಘಟನೆ ನಡೆದಿದೆ.
ಕಾರು ಚಲಾಯಿಸುತ್ತಿದ್ದಾಗ ಇಬ್ಬರಿಗೂ ಕಾರಿನೊಳಗೆ ಸುಟ್ಟ ಕಮಟು ವಾಸನೆ ಬಂದಿದೆ. ತಕ್ಷಣ ಕಾರು ನಿಲ್ಲಿಸಿ ಅವರಿಬ್ಬರು ಹೊರಬಂದಿದ್ದಾರೆ. ನೋಡುತ್ತಿದ್ದಂತೆ ಎಂಜಿನ್ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡು ಪೂರ್ತಿ ಕಾರನ್ನು ಆವರಿಸಿಕೊಂಡಿದೆ. ಘಟನೆ ನಡೆದ 15 ನಿಮಿಷದಲ್ಲಿಯೇ ಎರಡು ಅಗ್ನಿಶಾಮಕವಾಹನ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ.
ಈ ಕಾರನ್ನು ಸೇರಿಸಿದರೆ ಇಲ್ಲಿವರೆಗೆ ಬೆಂಕಿಗಾಹುತಿಯಾದ ನ್ಯಾನೊ ಕಾರುಗಳ ಸಂಖ್ಯೆ 11ಕ್ಕೆ ಮುಟ್ಟುತ್ತದೆ. ಇದರಲ್ಲಿ ಒಂದು ಕಾರು ದೇಶದ ಗಡಿದಾಟಿ ಶ್ರೀಲಂಕಾದಲ್ಲೂ ಉರಿದಿದೆ.


Click it and Unblock the Notifications








