ಬೆಂಗಳೂರಿಗೆ ಬಂದಾನೋ ಎಫ್1 ಹಮ್ಮೀರ ಹ್ಯಾಮಿಲ್ಟನ್

ಫಾರ್ಮುಲಾ ಒನ್ ಹಮ್ಮೀರ ಬ್ರಿಟನಿನ ಲೆವಿಸ್ ಹ್ಯಾಮಿಲ್ಟನ್ ಹಮ್ಮಿಗೆಪುರ ನೈಸ್ ರಸ್ತೆಯಲ್ಲಿ ಇಂದು ಮೆಕ್ ಲಾರೆನ್ ಮರ್ಸಿಡಿಸ್ ಎಂ4-25 ಚಾಲನೆ ಮಾಡಿದ್ದಾರೆ. ಅವರು ನಿನ್ನೆ ಬೆಂಗಳೂರಿಗೆ ಆಗಮಿಸಿದ್ದರು. ಅವರ ಭದ್ರತೆಗೆ ಪ್ಯಾರಾಮಿಲಿಟರಿ ಕಮಾಂಡೊಗಳನ್ನು ನಿಯೋಜಿಸಲಾಗಿದೆ.
ಅಕ್ಟೋಬರ್ ನಲ್ಲಿ ಗುರ್ ಗಾಂವ್ ನಲ್ಲಿಯಲ್ಲಿರುವ ಇಂಡಿಯನ್ ಗ್ರಾಂಡ್ ಪ್ರಿಕ್ಸ್ ಪ್ರಮೋಷನ್ ಗಾಗಿ ವೋಡಾಫೋನ್ ಇವರನ್ನು ಕರೆಸಿದೆ. 2008ರಲ್ಲಿ ನಡೆದ ಫಾರ್ಮುಲಾ ಒನ್ ಚಾಂಪಿಯನ್ ಷಿಪ್ ನಲ್ಲಿ ಹಾಮಿಲ್ಟನ್ 5 ಗ್ರಾಂಡ್ ಪ್ರಿಕ್ಸ್ ಪ್ರಶಸ್ತಿಯನ್ನು ಪಡೆದಿದ್ದಾರೆ. ಇದೀಗ ಹ್ಯಾಮಿಲ್ಟನ್ ಫಾರ್ಮುಲಾ ಒನ್ ಚಾಲಕರಲ್ಲಿ ಐದನೇ ಸ್ಥಾನದಲ್ಲಿದ್ದಾರೆ.
ಸುಮಾರು 5 ಸಾವಿರಕ್ಕೂ ಹೆಚ್ಚು ಜನರು ಈತನ ರೇಸ್ ನೋಡಲು ಆಗಮಿಸಿದ್ದರು. ಕನ್ನಡದ ಸೇರಿದಂತೆ ಹಲವು ಚಿತ್ರನಟರು ತಾರಾಮೆರುಗು ನೀಡಿದ್ದಾರೆ. ಡಿಪಿಎಸ್ ಮತ್ತು ಇಂಡಸ್ ಇಂಟರ್ ನ್ಯಾಷನಲ್ ಸ್ಕೂಲಿನ ಸಾವಿರ ವಿದ್ಯಾರ್ಥಿಗಳು ಹಮಿಲ್ಟನ್ ಸ್ವಾಗತಿಸಿದ್ದಾರೆ.
ಲಕ್ಕಿಡ್ರಾದಲ್ಲಿ ಆಯ್ಕೆಯಾದವರಿಗೆ ಇವರೊಂದಿಗೆ ಸೂಪರ್ ಫಾಸ್ಟ್ ಕಾರಿನಲ್ಲಿ ಸವಾರಿ ಮಾಡುವ ಯೋಗವೂ ದೊರಕಿದೆ. ಮಲ್ಟನ್ ಮೆಕ್ ಲಾರೆನ್ ಮರ್ಸಡಿಸ್ ಕಾರಿನಲ್ಲಿ 2008ರಲ್ಲಿ ನಡೆದ ಫಾರ್ಮುಲಾ ಒನ್ ಚಾಂಪಿಯನ್ ಷಿಪ್ ನಲ್ಲಿ ಗೆಲುವು ಪಡೆದಿದ್ದಾರೆ.


Click it and Unblock the Notifications








