ಗೌತಮ್ ಗಂಭೀರ್ ಮದುವೆಯಂತೆ, ಆದ್ರೆ ಫಸ್ಟ್ ಲವ್?!

ಕ್ರಿಕೆಟಿಗರಲ್ಲಿ ಹಣಕ್ಕೆ ಕೊರತೆಯಿಲ್ಲ. ಅದೇ ಸಮಯಕ್ಕೆ ಶೋಕಿ ಕೂಡ ಜೊತೆಯಾಗುತ್ತದೆ. ಹೀಗಾಗಿ ನಮ್ಮ ಕ್ರಿಕೆಟಿಗರಿಗೆ ಕಾರು ಕ್ರೇಜ್ ಸ್ವಲ್ಪ ಜಾಸ್ತಿನೇ ಇದೆ. ನಮ್ಮ ಗೌತಮ್ ಗಂಭೀರ್ ಗೂ ಕಾರುಗಳೆಂದರೆ ಇಷ್ಟ. ಅವರಿಗೆ ಕಾರು ಫಸ್ಟ್ ಲವ್ ಅಂತ ಹಲವು ವಾಹನ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.
ಗೌತಮ್ ಗಂಭೀರ್ ಟೊಯೊಟಾ ಕೊರೊಲಾ ಮತ್ತು ಮಾರುತಿ ಸುಜುಕಿ ಎಕ್ಸ್4 ಕಾರು ಹೊಂದಿದ್ದಾರೆ. ಇದರಿಂದ ಅವರಿಗೆ ಶಕ್ತಿಶಾಲಿ ಸೆಡಾನ್ ಕಾರುಗಳತ್ತ ಇರುವ ಪ್ರೀತಿ ಅರಿವಾಗುತ್ತದೆ. ಕೊರೊಲಾ ಕಾರು ಗುಣಮಟ್ಟದಲ್ಲಿ ಜಗತ್ತಿನಲ್ಲಿ ಫೇಮಸ್ಸು. ಮಾರುತಿ ಎಸ್ಎಕ್ಸ್4 ಕೂಡ ಕಾರ್ಯಕ್ಷಮತೆಯಲ್ಲಿ ಶಕ್ತಿಶಾಲಿ.
ಗಂಭೀರ್ ಬಳಿ ಬೊಲೆರೊ ಕಾರು ಕೂಡ ಇದೆ. 2009ರಲ್ಲಿ ಬೊಲೆರೊ ಕಾರು ಬ್ರಾಂಡಿನ ರಾಯಭಾರಿ ಕೂಡ ಆಗಿದ್ದರು. ಇಷ್ಟೇ ಅಲ್ಲದೇ ಗೌತಮ್ ಗಂಭೀರ್ ಗೆ ಮೋಟರ್ ರೇಸಿಂಗ್ ನಲ್ಲೂ ಆಸಕ್ತಿಯಿದೆ. ಎಂಆರ್ಎಫ್ ಫಾರ್ಮುಲಾ ಫೋರ್ಡ್ ಕಾರು ರೇಸಿಂಗ್ ಗೆ ಯತ್ನಿಸಿದ್ದರು.
ಅವಕಾಶ ಸಿಕ್ಕಿದಾಗಲೆಲ್ಲ ಗೌತಮ್ ಗಂಭೀರ್ ಹೆಚ್ಚು ಡ್ರೈವ್ ಮಾಡೋಕ್ಕೆ ಇಷ್ಟಪಡುತ್ತಾರೆ. ಅವರು ಕ್ರಿಕೆಟಿನ ನಂತರ ಹೆಚ್ಚು ಪ್ರೀತಿಸುವುದು ಕಾರುಗಳನ್ನು ಎಂದು ಹೇಳಲಾಗಿದೆ. ಹೀಗಾಗಿ ಅವರ ಫಸ್ಟ್ ಲವ್ ಅಂದ್ರೆ ಕಾರುಗಳಂತೆ. ಹೀಗಾಗಿ ಈ ವಿಷಯ ಅವರ ಭಾವಿಪತ್ನಿ ನಟಶಾ ಜೈನಿಗೆ ಕೋಪತರಿಸದು.


Click it and Unblock the Notifications








