ಮಹೀಂದ್ರ ಎಕ್ಸ್ ಯುವಿ 500 ದರ ಎಷ್ಟು ಗುರು?

ನೂತನ ಎಕ್ಸ್ ಯುವಿ500 ಕಾರು ಮೂರು ಆವೃತ್ತಿಗಳಲ್ಲಿ ದೊರಕುತ್ತದೆ. ಇದರ ಎಂಟ್ರಿ ಲೆವೆಲ್ ಆವೃತ್ತಿಗೆ ದೆಹಲಿ ಎಕ್ಸ್ ಶೋರೂಂ ದರ 10.80 ಲಕ್ಷ ರುಪಾಯಿ ಆಗಿದೆ. ಈ ಕಾರು ಡಬ್ಲ್ಯು6, ಡಬ್ಲ್ಯು8 ಆವೃತ್ತಿಗಳಲ್ಲಿ ದೊರಕುತ್ತಿದೆ. ಡಬಲ್ಯು8 ಕಾರು 2 ವೀಲ್ ಮತ್ತು 4 ವೀಲ್ ಡ್ರೈವ್ ಆಯ್ಕೆಗಳಲ್ಲಿ ದೊರಕುತ್ತಿದೆ.
* ಮಹೀಂದ್ರ ಎಕ್ಸ್ ಯುವಿ 500 ಡಬ್ಲ್ಯು6 ದರ: 10.80 ಲಕ್ಷ ರುಪಾಯಿ
* ಮಹೀಂದ್ರ ಎಕ್ಸ್ ಯುವಿ 500 ಡಬ್ಲ್ಯು8 (2 ವೀಲ್ ಡ್ರೈವ್) ದರ: 11.95 ಲಕ್ಷ ರುಪಾಯಿ
* ಮಹೀಂದ್ರ ಎಕ್ಸ್ ಯುವಿ500 ಡಬ್ಲ್ಯು8 (4 ವೀಲ್ ಡ್ರೈವ್) ದರ: 12.88 ಲಕ್ಷ ರುಪಾಯಿ
ನೂತನ ಎಕ್ಸ್ ಯುವಿ ಕಾರು 2.2 ಲೀಟರಿನ ಸಿಆರ್ ಡಿಐ ಡೀಸೆಲ್ ಎಂಜಿನ್ ಹೊಂದಿದೆ. ಇದು 140 ಹಾರ್ಸ್ ಪವರ್ ಮತ್ತು 330 ಎನ್ ಎಂ ಟಾರ್ಕ್ ನೀಡುತ್ತದೆ. ಈ ಕಾರು ಸ್ಪೋರ್ಟ್ಸ್ ಯುಟಿಲಿಟಿ ವಾಹನಗಳಲ್ಲೇ ಅತ್ಯುತ್ತಮವಾದ ಮೈಲೇಜ್ ನೀಡುತ್ತದೆ. ಕಂಪನಿಯ ಪ್ರಕಾರ ಇದರಲ್ಲಿ ಪ್ರತಿಲೀಟರ್ ಗೆ 15 ಕಿ.ಮೀ. ಮೈಲೇಜ್ ಪಡೆಯಬಹುದು.
ಮಧ್ಯಮ ದರ್ಜೆಯ ಕುಟುಂಬಗಳನ್ನೂ ಈ ಕಾರು ತಲುಪಲೆಂಬ ಸದುದ್ದೇಶದಿಂದ ಕಂಪನಿಯು ನೂತನ ಕಾರಿನ ದರವನ್ನು 11 ಲಕ್ಷ ರು.ಗಿಂತ ಕಡಿಮೆ ಮಾಡಿದೆ. ಈ ಕಾರು 7 ಸೀಟು ಹೊಂದಿದ್ದು ದೊಡ್ಡ ಕುಟುಂಬ ಸವಾರಿಗೆ ಸೂಕ್ತವಾಗಿದೆ.


Click it and Unblock the Notifications








