ಬೆತ್ತಲೆ ಬೈಸಿಕಲ್ ಸವಾರಿಗೆ ನಮ್ಮ ವಿರೋಧವಿದೆ!!
ಇವರೆಲ್ಲ ಎಗ್ಗಿಲ್ಲದೇ ಬೆತ್ತಲಾಗಿ ಸೈಕಲ್ ಸವಾರಿ ಮಾಡೋದು ಎಲ್ಲರಿಗೂ ಇಷ್ಟವಾಗೋದಿಲ್ಲ. ಛೀ ನಿಮಗೆ ಮಾನ ಮರ್ಯಾದೆ ಚೂರು ಇಲ್ವ ಅಂತ ವಿರೋಧಿಸುವರೂ ಸಾಕಷ್ಟು ಜನರಿದ್ದಾರೆ. ನಿಮ್ಮನ್ನು ನೋಡಿ ನಮ್ಮ ಮಕ್ಕಳೆಲ್ಲ ಹಾಳಾಗುತ್ತಿದ್ದಾರೆ ಅಂತ ಕೇಸ್ ಜಡಿದವರೂ ಇದ್ದಾರೆ.
ಇದು ನಮ್ಮ ಸ್ವಾತಂತ್ರ್ಯ. ಇದು ನಮ್ಮ ಮೂಲಭೂತ ಹಕ್ಕು. ಹಾಗಂತ ವಾದಿಸಿದ ಹಲವು ನಗ್ನ ಸವಾರನ್ನು ಕೆಲವೊಂದು ಸಾರಿ ಪೊಲೀಸರು ಬಂಧಿಸಿದ್ದು ಉಂಟು. ಸ್ಥಳೀಯ ಕಾನೂನು, ಸ್ಥಳೀಯ ಪೊಲೀಸರ ನೀತಿ ಮತ್ತು ಸ್ಥಳೀಯ ಸಾಂಸ್ಕ್ರತಿಕ ನಿರೀಕ್ಷೆಯ ಹಿನ್ನಲೆಗಳ ನಡುವೆ ಬೆತ್ತಲೆ ಸವಾರಿಗೆ ವಿರೋಧಗಳು ವ್ಯಕ್ತವಾಗುತ್ತವೆ. ಆದರೂ ಕಾನೂನಿನ ಮಿತಿಯೊಳಗೆ ಇಂತಹ ನಗ್ನ ಸೈಕಲ್ ಸವಾರಿ ಕೂಟಗಳು ಈಗಲೂ ನಡೆಯುತ್ತವೆ.
ಇದರ ಕುರಿತು ಎರಡು ಸಿನಿಮಾಗಳು ಬಂದಿವೆ. 2008ರಲ್ಲಿ World Naked Bike Ride ಎಂಬ ಚಲನಚಿತ್ರವನ್ನು ಜಾನಿ ಝಾಪ್ಟೊಸ್ ನಿರ್ದೇಶನ ಮಾಡಿದ್ದರು. ವಿಶ್ವ ನಗ್ನ ಸೈಕಲ್ ಸವಾರಿ ಕುರಿತಾದ Indecent Exposure to Cars ಎಂಬ ಚಿತ್ರವೂ ತೆರೆಕಂಡಿದೆ. ಮುಂದಿನ ನಗ್ನ ಸೈಕಲ್ ಸವಾರಿ ನೋಡಲು ಮುಂದಿನ ವರ್ಷದ ಫೆಬ್ರವರಿ ತಿಂಗಳವರೆಗೆ ಕಾಯಬೇಕು.


Click it and Unblock the Notifications









