ಆಟೋ ಜಾಬ್ ಟ್ರೆಂಡ್ ಹೇಗಿದೆ? ಚೆಕ್ ಮಾಡಿ

Auto sector hiring down 22% in Fiscal year 2011-12
ವಾಹನೋದ್ಯಮದಲ್ಲಿ ಪ್ರಸಕ್ತ ಆರ್ಥಿಕ ವರ್ಷದ ಇಲ್ಲಿವರೆಗಿನ ಉದ್ಯೋಗಾವಕಾಶ ಟ್ರೆಂಡ್ ನಿರಾಶದಾಯಕವಾಗಿದೆ. 2011-12 ಹಣಕಾಸು ವರ್ಷದಲ್ಲಿ ವಾಹನ ಕ್ಷೇತ್ರದ ನೇಮಕಾತಿ ಪ್ರಕ್ರಿಯೆ ಶೇ. 22ರಷ್ಟು ಇಳಿಕೆ ಕಂಡಿದೆ. ಆದಗ್ಯೂ ಮುಂದಿನ ತಿಂಗಳುಗಳಲ್ಲಿ ನೇಮಕಾತಿ ಪ್ರಕ್ರಿಯೆ ಬಿರುಸುಗೊಳ್ಳುವ ನಿರೀಕ್ಷೆಯನ್ನು ವಿಶ್ಲೇಷಕರು ವ್ಯಕ್ತಪಡಿಸಿದ್ದಾರೆ.

"ಮುಂದಿನ ತಿಂಗಳುಗಳಲ್ಲಿ ಉದ್ಯೋಗಾವಕಾಶ ಹೆಚ್ಚಾಗಲಿದೆ. ಆದರೆ ಸದ್ಯದ ಸ್ಥಿತಿ ನಿರಾಶದಾಯಕ. ಕಂಪನಿಯು ಹಲವು ವಿಸ್ತರಣೆ ಯೋಜನೆ ಹೊಂದಿರುವುದರಿಂದ ಮುಂದಿನ ದಿನಗಳಲ್ಲಿ ಹೆಚ್ಚಿನ ಸಿಬ್ಬಂದಿ ನೇಮಕಾತಿ ಮಾಡಲಿದ್ದೇವೆ" ಎಂದು ಹ್ಯುಂಡೈ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

"ಮುಂದಿನ ಹಬ್ಬದ ಸೀಸನ್ ನಲ್ಲಿ ಮಾರಾಟ ಭಾರಿ ಪ್ರಮಾಣದಲ್ಲಿ ಹೆಚ್ಚಾಗಲಿದೆ. ಹೀಗಾಗಿ ಮುಂದಿನ ತಿಂಗಳುಗಳಲ್ಲಿ ಉದ್ಯೋಗ ಮಾರುಕಟ್ಟೆಯಲ್ಲೂ ಸಾಕಷ್ಟು ಅವಕಾಶವಿದೆ" ಎಂದು ಫೋರ್ಡ್ ಪ್ರಧಾನ ವ್ಯವಸ್ಥಾಪಕರು ಹೇಳುತ್ತಾರೆ. "ಆದರೆ ಕಳೆದ ವರ್ಷದಷ್ಟು ಈ ಆರ್ಥಿಕ ವರ್ಷದಲ್ಲಿ ಸಿಬ್ಬಂದಿ ನೇಮಕಾತಿ ಮಾಡುವ ಯೋಜನೆಯಿಲ್ಲ" ಎಂದು ಅವರು ತಿಳಿಸಿದ್ದಾರೆ.

"2011ರ ಆಗಸ್ಟ್-ಸೆಪ್ಟೆಂಬರ್ ಅವಧಿಯಲ್ಲಿ ವಾಹನೋದ್ಯಮ ಕೇವಲ 724 ಸಿಬ್ಬಂದಿ ನೇಮಕ ಮಾಡಿಕೊಂಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿನ 1,022 ನೇಮಕಾತಿಗೆ ಹೋಲಿಸಿದರೆ ಶೇಕಡ 22ರಷ್ಟು ಇಳಿಕೆ ಕಂಡಿದೆ" ಎಂದು ನೇಮಕಾತಿ ವಿಶ್ಲೇಷಕ ಕಂಪನಿ ಮೈಹೈರಿಂಗ್ ಕ್ಲಬ್ ಹೇಳಿದೆ.

ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಈಗ ನೇಮಕಾತಿ ಪ್ರಕ್ರಿಯೆ ನಾಲ್ಕನೇ ಒಂದರಷ್ಟು ಇಳಿಕೆ ಕಂಡಿದೆ. ಇಂಧನ ದರ ಹೆಚ್ಚಳ, ಬಡ್ಡಿದರ ಹೆಚ್ಚಳ ಇತ್ಯಾದಿ ನೆಪಗಳಿಂದ ಕಂಪನಿಗಳು ನೇಮಕಾತಿಗೆ ಹಿಂಜರಿಯುತ್ತಿವೆ" ಎಂದು ಹೈರಿಂಗ್ ಕ್ಲಬ್ ಸಿಇಒ ಹೇಳಿದ್ದಾರೆ.

"ಆದರೆ ಕೆಲವು ಕಂಪನಿಗಳು ಹಲವು ವಿಸ್ತರಣಾ ಯೋಜನೆಗಳನ್ನು ಹೊಂದಿವೆ. ಹೊಸ ಕಾರುಗಳು ಬಿಡುಗಡೆಯಾಗಲಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ನೇಮಕಾತಿ ನಡೆಯುವ ನಿರೀಕ್ಷೆಯಿದೆ. ಆದರೆ ಇದರ ಸರಾಸರಿ ಪ್ರಮಾಣ ಕಳೆದ ಆರ್ಥಿಕ ವರ್ಷಕ್ಕಿಂತ ಕಡಿಮೆ ಇರುವ ಸಾಧ್ಯತೆಯಿದೆ" ಎಂದು ಅವರು ಹೇಳುತ್ತಾರೆ.

ವಾಹನ ಕ್ಷೇತ್ರದತ್ತ ಅದಮ್ಯ ಒಲವು, ತಾಂತ್ರಿಕ ಪರಿಣತಿಯ ಹಿನ್ನೆಲೆ, ಕ್ರಿಯೆಟಿವ್ ಮೈಂಡ್ ಮತ್ತು ಪ್ರತಿಭೆ ಇರುವರಿಗೆ ವಾಹನ ಕ್ಷೇತ್ರದಲ್ಲಿ ಉದ್ಯೋಗ ಪಡೆದುಕೊಳ್ಳಲು ಸಮಸ್ಯೆಯಿಲ್ಲ ಎಂದು ವಿಶ್ಲೇಷಕರು ಹೇಳುತ್ತಾರೆ.

More from DriveSpark

Article Published On: Monday, October 3, 2011, 13:28 [IST]
English summary
India Auto sector has witnessed a 22% decline in hiring activities in Fiscal year 2011-12. But the job scenario will be robust in the coming months say experts.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+