ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಗೆ ದುಬಾರಿ ಸೇಫ್ಟಿ ಕಾರು!!

President Pratibha Patil New Mercedes Benz S600L Pullman Car
ದೇಶದ ಪ್ರಥಮ ಪ್ರಜೆ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಗೆ ಮರ್ಸಿಡಿಸ್ ಬೆಂಝ್ ಎಸ್600ಎಲ್ ಪಾಲ್ ಮ್ಯಾನ್ ಕಾರು ನೀಡಲಾಗಿದೆ ಎಂದು ವರದಿಗಳು ಹೇಳಿವೆ. ಈ ಕಾರು ಮಿಲಿಟರಿ ದರ್ಜೆಯ ವಿಶೇಷ ಸುರಕ್ಷತಾ ಫೀಚರುಗಳನ್ನು ಹೊಂದಿದೆ. ಅಂದರೆ ಸಣ್ಣಮಟ್ಟದ ಸ್ಪೋಟ, ಗ್ರೇನೆಡ್ ದಾಳಿಗಳಿಂದ ಪಾರಾಗುವಂತಹ ಸೇಫ್ಟಿ ಫೀಚರ್ಸ್ ಇದರಲ್ಲಿದೆಯಂತೆ!

ಮರ್ಸಿಡಿಸ್ ನ ಈ ಆವೃತ್ತಿಯನ್ನು ಸುಮಾರು 8 ವರ್ಷಗಳ ನಂತರ ಪರಿಷ್ಕರಿಸಲಾಗಿದೆ. ಆದರೆ ಈ ಕುರಿತು ಪ್ರತಿಕ್ರಿಯೆ ನೀಡಲು ರಾಷ್ಟ್ರಪತಿ ಭವನದ ಅಧಿಕಾರಿಗಳು ಮತ್ತು ಮರ್ಸಿಡಿಸ್ ಬೆಂಝ್ ಕಂಪನಿ ನಿರಾಕರಿಸಿದೆ. ಆದರೆ ಈ ಕಾರಿನ ದರ/ವೆಚ್ಚ ಸುಮಾರು 6 ಕೋಟಿ ರು. ಎಂದು ಅಂದಾಜಿಸಲಾಗಿದೆ.

ಈ ವರ್ಷದ ಮಧ್ಯದಲ್ಲಿಯೇ ಈ ಕಾರನ್ನು ಖರೀದಿಸಲಾಗಿದೆ ಮತ್ತು ವಿಶೇಷ ಸುರಕ್ಷತಾ ವಾಹನವಾಗಿ ಪರಿವರ್ತಿಸಲು ಸಾಕಷ್ಟು ಸಮಯ ಹಿಡಿಯಬಹುದು ಎನ್ನಲಾಗಿದೆ. ಈ ಕಾರನ್ನು ಕೇವಲ ರಾಷ್ಟ್ರಪತಿಯವರ ಪ್ರಯಾಣಕ್ಕೆ ಬಳಸಲಾಗುವುದು ಎಂದು ಮೂಲಗಳು ಹೇಳಿವೆ.

ಇದು ಉದ್ದವಾದ ಕಾರು. ಇದು ಆರಾಮದಾಯಕ ಪ್ರಯಾಣಕ್ಕೆ ಸೂಕ್ತವಾಗಿದೆ. ಎಸ್ ಕ್ಲಾಸ್ ಕಾರುಗಳಿಗೆ ಹೋಲಿಸಿದರೆ ಸುಮಾರು 115 ಮೀಟರ್ ಉದ್ದದ ಕಾರು ಇದಾಗಿದೆ. ಇದು 12 ಸಿಲಿಂಡರ್ ಬೈಟರ್ಬೊ ಎಂಜಿನ್ ಹೊಂದಿದ್ದು, ಸುಮಾರು 517 ಅಶ್ವಶಕ್ತಿ ನೀಡುತ್ತದೆ.

ಪ್ರಧಾನ ಮಂತ್ರಿಗಳು ಬಿಎಂಡಬ್ಲ್ಯು 7 ಸೀರಿಸ್ ನ ಬಿ5 ಶ್ರೇಣಿಯ ಎರಡು ಕಾರುಗಳನ್ನು ಬಳಸುತ್ತಾರೆ. ಈ ಹಿಂದೆ ಪ್ರಧಾನಿಯಾಗಿದ್ದ ವಾಜಪೇಯಿ ಹಿಂದೂಸ್ತಾನ್ ಮೋಟರ್ಸ್ ನ ವಿಶೇಷವಾಗಿ ನಿರ್ಮಿಸಿದ ಟಾಟಾ ಸಫಾರಿಯಂತಹ ಕಾರೊಂದನ್ನು ಬಳಸುತ್ತಿದ್ದರು.

Article Published On: Wednesday, October 5, 2011, 18:04 [IST]
English summary
Pratibha Patil, President of India has been provided a special protection feature car Mercedes Benz S600L Pullman Some report said. The Prime Minister uses two B5-level armored BMW 7 Series. Both are escorted by the SPG in BMW X5's. Read More...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+