ಹ್ಯುಂಡೈ ಐ10: ಜನಪ್ರಿಯತೆಯಲ್ಲಿ ಮೂರನೇ ಸ್ಥಾನ

ಹ್ಯುಂಡೈ ಐ10 ಕಾರುಗಳು ಅತ್ಯುತ್ತಮ ಇಂಧನ ದಕ್ಷತೆ ಮತ್ತು ಫೀಚರುಗಳಿಂದ ಮಾಸ್ ಜನರಿಗೆ ಇಷ್ಟವಾಗಿದೆ. ಇದು ದೇಶದ ರಸ್ತೆಗೆ ಹೆಚ್ಚು ಸೂಕ್ತವಾದ ಕಾರೆಂದು ಹೇಳಲಾಗಿದೆ.
ಹ್ಯುಂಡೈ ಐ10 ಹಲವು ಆವೃತ್ತಿಗಳಲ್ಲಿ ದೊರಕುತ್ತವೆ. ಇದರಲ್ಲಿ ಐ10 ಐಆರ್ಡಿಇ ಯಲ್ಲಿ ಡಿ-ಲೈಟ್, ಇರಾ, ಮ್ಯಾಗ್ನಾ ಕಾರುಗಳು ದೊರಕುತ್ತವೆ. ಈ ಆವೃತ್ತಿಗಳ ಬೆಂಗಳೂರು ಎಕ್ಸ್ ಶೋರೂಂ ದರ 3.58 ಲಕ್ಷ ರು.ನಿಂದ 4.07 ಲಕ್ಷ ರು.ವರೆಗಿದೆ.
ಐ10 ಕಾರುಗಳು 1.2 ಲೀಟರಿನ ಕಪ್ಪಾ ಎಂಜಿನ್ ಆಯ್ಕೆಯಲ್ಲೂ ದೊರಕುತ್ತಿವೆ. ಇವುಗಳ ಬೆಂಗಳೂರು ಎಕ್ಸ್ ಶೋರೂಂ ದರ 4.24 ಲಕ್ಷ ರು.ನಿಂದ 6.06 ಲಕ್ಷ ರು.ವರೆಗಿದೆ. ದೆಹಲಿ, ಆಗ್ರಾ ಮತ್ತು ಮುಂಬೈನಲ್ಲಿ ಐ10 ಸಿಎನ್ ಜಿ ಆವೃತ್ತಿ ಕೂಡ ದೊರಕುತ್ತದೆ. ಇದರ ಮೈಲೇಜ್ ಸುಮಾರು ಪ್ರತಿಲೀಟರ್ ಗೆ 14 ಕಿ.ಮೀ.ಯಿಂದ 15 ಕಿ.ಮೀ.ವರೆಗಿದೆ.


Click it and Unblock the Notifications








