ನಂಬರ್ ಒನ್ ಕಾರು ಮಾರುತಿ ಸುಜುಕಿ ಆಲ್ಟೊ

Maruti suzuki Alto
ದೇಶದಲ್ಲಿರುವ ಜನಪ್ರಿಯ ಕಾರುಗಳಲ್ಲಿ ಆಲ್ಟೊ ಖದರು ಮರೆಯುವ ಹಾಗಿಲ್ಲ. ರಸ್ತೆಯ ಮೇಲೆ ಕಣ್ಣು ಹಾಯಿಸಿದರೆ ಹೆಚ್ಚು ಸಂಖ್ಯೆಯ ಆಲ್ಟೊ ಕಾರುಗಳು ಕಣ್ಣಿಗೆ ಬೀಳುತ್ತವೆ. ಇದರ ಜನಪ್ರಿಯತೆಗೆ ಇದಕ್ಕಿಂತ ಹೆಚ್ಚಿನ ನಿದರ್ಶನ ಬೇಕಿಲ್ಲ. ಮಾಸ್ ಜನರಿಗೆ ಇಷ್ಟವಾದ ಬಾಸ್ ಅಂದ್ರೆ ಆಲ್ಟೊ.

ಮಾರುತಿ ಸುಜುಕಿ ಆಲ್ಟೊ 998 ಸಿಸಿ, 3 ಸಿಲಿಂಡರ್, ಕೆ10 ಬಿ ಪೆಟ್ರೋಲ್ ಎಂಜಿನ್ ಹೊಂದಿದೆ. ಇದು 6,200 ಆರ್ ಪಿಎಂಗೆ, ಗರಿಷ್ಠ 68 ಪಿಎಸ್ ಪವರ್ ನೀಡುತ್ತದೆ. 3,500 ಆರ್ ಪಿಎಂಗೆ 90 ಎನ್ ಎಂ ಟಾರ್ಕ್ ಪವರ್ ನೀಡುತ್ತದೆ.

ಇದು ಅತ್ಯುತ್ತಮ ಮೈಲೇಜ್ ಕಾರು ಕೂಡ ಹೌದು. ಉದಾಹರಣೆಗೆ ಆಲ್ಟೊ ಕೆ10 ವಿಎಕ್ಸ್ಐ ಕಾರು ಹೆದ್ದಾರಿಗಳಲ್ಲಿ ಪ್ರತಿ ಲೀಟರ್ ಗೆ 20 ಕಿ.ಮಿ. ಮತ್ತು ಸಿಟಿ ರಸ್ತೆಯಲ್ಲಿ ಪ್ರತಿ ಲೀಟರ್ ಗೆ ಸುಮಾರು 15 ಕಿ.ಮೀ. ಮೈಲೇಜ್ ನೀಡುತ್ತದೆ. ಹೀಗಾಗಿ ಇದು ಹೆಚ್ಚು ಜನಪ್ರಿಯವಾದ ಮೈಲೇಜ್ ಕಾರು ಕೂಡ ಹೌದು.

ಇದರ ದರ ಕೂಡ ಸುಮಾರು 3.60 ಲಕ್ಷ ರು.ನಿಂದ ಆರಂಭವಾಗುತ್ತದೆ. ಹೀಗಾಗಿ ಇದು ಹಾಟ್ ಕೇಕ್ ನಂತೆ ಮಾರಾಟವಾಗುತ್ತಿದೆ. ಕಳೆದ ಆರ್ಥಿಕ ವರ್ಷದಲ್ಲಿ ಕಂಪನಿಯು 33,015 ಆಲ್ಟೊ ಕಾರುಗಳನ್ನು ಮಾರಾಟ ಮಾಡಿತ್ತು. ಹೀಗಾಗಿ ಹಬ್ಬಕ್ಕೆ ಕಾರು ಖರೀದಿಸುವ ಮುನ್ನ ಆಲ್ಟೊ ಕಾರನ್ನೊಮ್ಮೆ ಇಣುಕಿ ನೋಡಬಹುದು.

ಆಲ್ಟೊ ಬೇಡಾಂದ್ರೆ ಬೇರೆ ಯಾವ ಕಾರಿದೆ? Next...

More from DriveSpark

Article Published On: Tuesday, October 11, 2011, 15:31 [IST]
English summary
Top best popular cars in Indian Market. Maruti suzuki Alto, Swift, Wagon R and Hyundai Santro Xing, Hyundai i10 is the Most popular cars in India. Read here popular cars Price, Mileage, Reviews, comparisons, specifications..
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+