ಹ್ಯುಂಡೈ ಇಯಾನ್ "ಆನ್" ಕಾರ್ಯಕ್ರಮ ಇಲ್ಲಿದೆ ನೋಡಿರಿ!

ಹ್ಯುಂಡೈ ಇಯಾನ್ ಇತ್ತೀಚಿನ ದಿನಗಳಲ್ಲಿ ಹೆಚ್ಚು ನಿರೀಕ್ಷೆ ಹುಟ್ಟಿಸಿರುವ ಕಾರು. ಅದರ ದರ, 800 ಸಿಸಿ ಎಂಜಿನ್ ಎಲ್ಲವೂ ಪ್ರಮುಖ ಅಂಶಗಳು. ಈಗಾಗಲೇ ಸಾವಿರಾರು ಸಂಖ್ಯೆಯಲ್ಲಿ ಇಯಾನ್ ಕಾರಿನ ಬುಕ್ಕಿಂಗ್ ಕೂಡ ಆಗಿದೆ. ಇತ್ತೀಚಿನ ದಿನಗಳಲ್ಲಿ ಸ್ವಿಫ್ಟ್ ಕಾರಿನ ನಂತರ ಹೆಚ್ಚು ನಿರೀಕ್ಷೆ ಹುಟ್ಟಿಸಿದ ಕಾರಿದು.
ಹ್ಯುಂಡೈ ಇಯಾನ್ ಕೂಡ ರಸ್ತೆಗಿಳಿಯುವ ಮುನ್ನವೇ ಸಾಕಷ್ಟು ಪ್ರಮಾಣದಲ್ಲಿ ಬುಕ್ಕಿಂಗ್ ಆಗಿದೆ. ಹ್ಯುಂಡೈ ಡೀಲರುಗಳು ಅಕ್ಟೋಬರ್ ಒಂದರಿಂದ ಇಯಾನ್ ಬುಕ್ಕಿಂಗ್ ಆರಂಭಿಸಿದ್ದಾರೆ.
ಇಯಾನ್ ಅನಾವರಣ ಕಾರ್ಯಕ್ರಮವನ್ನು ಅದರ ವಿಶೇಷ ವೆಬ್ ಸೈಟಿನಲ್ಲಿಯೇ ನೋಡಬೇಕೆಂದಿಲ್ಲ. ಹೆಚ್ಚಿನವರು ಹೆಚ್ಚು ಕಾಲ ಫೇಸ್ ಬುಕ್ ನಲ್ಲಿ ಕಳೆಯುವುದರಿಂದ ಇಯಾನ್ ಫೇಸ್ ಬುಕ್ ಫ್ಯಾನ್ ಪುಟದಲ್ಲಿಯೂ ಬಿಡುಗಡೆ ಕಾರ್ಯಕ್ರಮವನ್ನು ನೋಡಬಹುದಾಗಿದೆ.
ಹ್ಯುಂಡೈ ಇಯಾನ್ 8 ಆವೃತ್ತಿಗಳಲ್ಲಿ ದೊರಕಲಿದೆ ಎಂದು ಕೆಲವು ವರದಿಗಳು ಹೇಳಿವೆ. ಇದರ ದರ ಸುಮಾರು 2.5 ಲಕ್ಷ ರು.ನಿಂದ 3.7 ಲಕ್ಷ ರು.ವರೆಗಿರಲಿದೆ. ಇದು ಮಾರುತಿ ಸುಜುಕಿ ಆಲ್ಟೊಗೆ ಪ್ರಬಲ ಪೈಪೋಟಿ ನೀಡುವ ನಿರೀಕ್ಷೆಯಿದೆ.
ಹ್ಯುಂಡೈ ಇಯಾನ್ ಬಿಡುಗಡೆ ಕಾರ್ಯಕ್ರಮವನ್ನು ಅಕ್ಟೋಬರ್ 13ರಂದು ಬೆಳಗ್ಗೆ ಹನ್ನೊಂದುವರೆ ಗಂಟೆಗೆ ನೋಡಿರಿ. ಅದಕ್ಕಾಗಿ ಇಲ್ಲಿ ಕ್ಲಿಕ್ ಮಾಡಿರಿ.


Click it and Unblock the Notifications








