ಹ್ಯುಂಡೈ ಇಯಾನ್ ರಸ್ತೆಗೆ, ದರ? ಮೈಲೇಜ್?

ಬಹುನಿರೀಕ್ಷಿತ ಹ್ಯುಂಡೈ ಇಯಾನ್ ಕಾರು ರಸ್ತೆಗಿಳಿದಿದೆ. ಮಾರುತಿ ಸುಜುಕಿ 800 ಸ್ಥಾನಕ್ಕೆ ಬಂದ ಈ ಕಾರು ಈಗಾಗಲೇ ಸಾಕಷ್ಟು ಹೈಪ್ ಕ್ರಿಯೆಟ್ ಮಾಡಿತ್ತು. ನೂತನ ಕಾರಿನ ದರ 2.69 ಲಕ್ಷ ರು.ನಿಂದ 3.71 ಲಕ್ಷ ರು.(ಎಕ್ಸ್ ಶೋರೂಂ ದೆಹಲಿ)ವರೆಗಿದೆ.

ಇದು ಕೈಗೆಟುಕುವ ದರ ಸಣ್ಣಕಾರಾಗಿದ್ದು ಹೆಚ್ಚು ಜನರನ್ನು ಸೆಳೆಯುವ ನಿರೀಕ್ಷೆಯಿದೆ. ಈ ಕಾರು ಎ-ಸೆಗ್ಮೆಂಟಿನಲ್ಲಿರುವ ಆಲ್ಟೊ ಮತ್ತು ಷೆವರ್ಲೆ ಸ್ಪಾರ್ಕ್ ಗಳಿಗೆ ಪೈಪೋಟಿ ನೀಡಲಿದೆ.

ನೂತನ ಇಯಾನ್ ಕಾರು 814 ಸಿಸಿಯ, 3 ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಇದು 5,500 ಆರ್ ಪಿಎಂಗೆ 56 ಪಿಎಸ್ ಪವರ್ ಮತ್ತು 4 ಸಾವಿರ ಆರ್ ಪಿಎಂಗೆ 76.5 ಎನ್ ಎಂ ಟಾರ್ಕ್ ಪವರ್ ನೀಡುತ್ತದೆ. ಈ ಕಾರು ಪ್ರತಿಲೀಟರ್ ಗೆ ಸುಮಾರು 21.1 ಕಿ.ಮೀ. ಮೈಲೇಜ್ ನೀಡುತ್ತದೆ.

ನೂತನ ಇಯಾನ್ ಆರು ಆವೃತ್ತಿಗಳಲ್ಲಿ ದೊರಕುತ್ತದೆ. ಆರಂಭಿಕ ಆವೃತ್ತಿ ಡಿ-ಲೈಟ್ ದರ ಸುಮಾರು 2.69 ಲಕ್ಷ ರು. ಆಗಿದೆ. ಟಾಪ್ ಎಂಡ್ ಸ್ಪೋರ್ಟ್ಸ್ ಆವೃತ್ತಿ ದರ ಸುಮಾರು 3.71 ಲಕ್ಷ ರುಪಾಯಿ ಇದೆ.

ಆವೃತ್ತಿ ದರ
ಡಿ-ಲೈಟ್ 2,69,999 ರು.
ಡಿ-ಲೈಟ್(ಆಪ್ಷನಲ್) 2,91,869 ರು.
ಇರಾ 3,11,869 ರು.
ಮ್ಯಾಗ್ನಾ 3,36,869 ರು.
ಮ್ಯಾಗ್ನಾ(ಆಪ್ಷನಲ್) 3,46,869 ರು.
ಸ್ಪೋರ್ಟ್ ಜ್ 3,71,869 ರು.

More from DriveSpark

Article Published On: Thursday, October 13, 2011, 14:58 [IST]
English summary
Hyundai Motors Launched small car EON. New EON priced between Rs 2.69 Lakhs and Rs 3.71 Lakhs.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+