ಸುಜುಕಿ ಇಂಟ್ರುಡರ್ ಎಂ800 ಕ್ರೂಷ್ ಬೈಕ್ ಬೇಕೆ?!

ಈ ಹಿಂದಿನ ಎಂ1800 ರಕ್ಕಸ ಬೈಕಿಗೆ ಹೋಲಿಸಿದರೆ ಇದು ಮರಿರಕ್ಕಸ. ನೂತನ ಎಂ800 ಬೈಕಿನಲ್ಲಿ ಇಂಧನ ಟ್ಯಾಂಕ್, ಸೈಡ್ ಪ್ಯಾನಲ್, ಚಕ್ರ ಮತ್ತು ರಿಮ್ ಗಾತ್ರದಲ್ಲಿ ಒಂದಿಷ್ಟು ಹೊಸ ಬದಲಾವಣೆಗಳಾಗಿವೆ. ರೇಡಿಯೇಟರ್ ಮತ್ತು ಎಕ್ಸಾಸ್ಟ್ ಗಾತ್ರವೂ ಕೊಂಚ ಕಡಿಮೆಯಾಗಿದೆ.
ಹೆಸರಿನಂತೆ ಎಂ800 ಇಂಟ್ರುಡರ್ ಬೈಕ್ 805 ಸಿಸಿ ವಿ ಟ್ವಿನ್ ಪೆಟ್ರೋಲ್ ಎಂಜಿನ್ ಹೊಂದಿದೆ. ಇದು 53 ಪಿಎಸ್ ಪವರ್ ನೀಡುತ್ತದೆ. ಈ ಬೈಕ್ 5 ಸ್ಪೀಡ್ ಗೇರ್ ಬಾಕ್ಸ್ ಹೊಂದಿದೆ. ಎದುರಿನ ಚಕ್ರವು ಅವಳಿ ಡಿಸ್ಕ್ ಬ್ರೇಕ್ ಹೊಂದಿದೆ. ಹಿಂದಿನ ಚಕ್ರಕ್ಕೆ ಡ್ರಮ್ ಬ್ರೇಕ್ ಸಿಸ್ಟಮ್ ಇದೆ.
ಹೆದ್ದಾರಿಗಳಲ್ಲಿ ದೂರದ ಪ್ರವಾಸ ಕೈಗೊಳ್ಳುವರಿಗೆ ಇಂಟ್ರುಡರ್ ಎಂ800 ಬೈಕ್ ಸೂಕ್ತ. ಆರಾಮವಾಗಿ ಕುಳಿತು ಸವಾರಿ ಮಾಡಬಹುದಾದ ಈ ಬೈಕ್ ತುಂಬಾ ಸ್ಟೈಲಿಷ್ ಬೈಕ್ ಕೂಡ ಹೌದು. ಈ ಬೈಕಿನ ದರ ಸೇರಿದಂತೆ ಹೆಚ್ಚಿನ ಮಾಹಿತಿಗಾಗಿ ಕೊಂಚ ದಿನ ಕಾಯಬೇಕು.


Click it and Unblock the Notifications








