ಫಾರ್ಮುಲಾ ಒನ್ ರೇಸ್ ಬಗ್ಗೆ ನಿಮಗೆಷ್ಟು ಗೊತ್ತು?

Formula One Information guide
ಫಾರ್ಮುಲಾ ಒನ್ ಆಲಿಯಾಸ್ ಎಫ್1 ಅಂದ್ರೆ ಸಾಕು ಮನದಲ್ಲಿ ಏನೋ ಆವೇಗ. ಕಾರು ರೇಸಿನಲ್ಲಿ ಎಫ್1 ಭಾರಿ ಫೇಮಸ್ಸು. ಆದರೆ ಫಾರ್ಮುಲಾ ಒನ್ ಕುರಿತು ಹೆಚ್ಚಿನವರಿಗೆ ಸಂಪೂರ್ಣ ಅರಿವು ಇರಲಿಕ್ಕಿಲ್ಲ. ಸದ್ಯ ದೇಶದಲ್ಲಿ ಮೊದಲ ಫಾರ್ಮುಲಾ ಒನ್ ಜಿಪಿ ರೇಸ್ ನಡೆಯುತ್ತಿದೆ. ಇಲ್ಲಿವೆ ಫಾರ್ಮುಲಾ ಒನ್ ಕುರಿತು ನಿಮಗೆ ಗೊತ್ತಿರುವ ಗೊತ್ತಿಲ್ಲದ ಮಾಹಿತಿಗಳು.

ಫಾರ್ಮುಲಾ ಒನ್ ಎಂದರೇನು?
ಮೋಟರ್ ಸ್ಪೋರ್ಟ್ ಶೃಂಗದಲ್ಲಿರುವ ಕ್ರೀಡೆ. ಇಲ್ಲಿ ವೇಗವೇ ಪ್ರಧಾನ. ವಿಶೇಷ ಫಾರ್ಮುಲಾ ಒನ್ ಕಾರು ಮೂಲಕ ಕ್ರೀಡಾಳುಗಳು ಗೆಲುವು ಅಥವಾ ಸೋಲು ಪಡೆಯುತ್ತಾರೆ.

ಫಾರ್ಮುಲಾ ಒನ್ ನೀತಿನಿಯಮ ನಿರೂಪಕರು ಯಾರು?
ಎಫ್ಐಎ. ಅಂದ್ರೆ ಫೆಡರೇಷನ್ ಆಫ್ ಇಂಟರ್ ನ್ಯಾಷನಲ್ ಆಟೋಮೊಬೈಲ್. ಇದು ಪ್ಯಾರೀಸ್ ನಲ್ಲಿದ್ದು ನಾಲ್ಕು ಚಕ್ರದ ಮೋಟರ್ ಸ್ಪೋರ್ಟ್ಸ್ ನಡೆಸುತ್ತದೆ.

ಫಾರ್ಮುಲಾ ಒನ್ ಸೆಸನ್ ಎಂದರೇನು?

ಪ್ರತಿವರ್ಷ ಸರಣಿಯಲ್ಲಿ ನಡೆಯುವ ಫಾರ್ಮುಲಾ ಒನ್ ರೇಸಿಗೆ ಎಫ್1 ಸೆಸನ್ ಅಥವಾ ಗ್ರಾಂಡ್ ಪ್ರಿಕ್ಸ್ ಎನ್ನುತ್ತಾರೆ.

ಎಫ್1 ಕಾರು ಯಾರು ಡ್ರೈವ್ ಮಾಡಬಹುದು?
ಎಫ್1 ಡ್ರೈವಿಂಗ್ ಲೈಸನ್ಸ್ ಪಡೆಯಲು ಎಫ್ಐಎ ನಡೆಸುವ ಹಲವು ಪರೀಕ್ಷೆಗಳಲ್ಲಿ ಪದವಿ ಪಡೆಯಬೇಕು.

ಎಫ್1ಗೆ ಎಷ್ಟು ಜನ ಟೆಲಿವಿಷನ್ ವೀಕ್ಷಕರಿದ್ದಾರೆ?
ಕಳೆದ ವರ್ಷ ಸುಮಾರು 52.7 ಕೋಟಿ ಜನರು ಎಫ್1 ರೇಸನ್ನು ಟಿವಿಯಲ್ಲಿ ನೋಡಿದ್ದರು.

ಮೊದಲ ರೇಸ್ ಯಾವಾಗ ನಡೆಯಿತು?
ಎಫ್ 1 ರೇಸ್ ಯುರೋಪ್ ನಲ್ಲಿ 1920ರಲ್ಲಿ ಉದಯವಾಯಿತು. ಆದರೆ ಮೊದಲ ವಿಶ್ವ ಚಾಂಪಿಯನ್ ಷಿಪ್ ಆರಂಭವಾದದ್ದು 1950ರಲ್ಲಿ.

ಎಷ್ಟು ತಂಡಗಳಿಗೆ ಭಾಗವಹಿಸಲು ಅವಕಾಶವಿದೆ?
ಸದ್ಯ 12 ತಂಡಕ್ಕೆ ಮಾತ್ರ ಅವಕಾಶವಿದೆ.

ಏನಿದು ವಿಶ್ವ ಚಾಂಪಿಯನ್ ಷಿಪ್?

ಇಲ್ಲಿ ಎರಡು ವಿಶ್ವಚಾಂಪಿಯನ್ ಇದೆ. ಒಂದು ಡ್ರೈವರಿಗೆ. ಮತ್ತೊಂದು ತಂಡಕ್ಕೆ. ಅತ್ಯಧಿಕ ಅಂಕ ಪಡೆದ ತಂಡ ಮತ್ತು ಡ್ರೈವರ್ ವಿಶ್ವ ಚಾಂಪಿಯನ್ ಷಿಪ್ ಪ್ರಶಸ್ತಿ ಪಡೆಯುತ್ತಾರೆ.

ಮೊದಲ ವಿಜಯಮಾಲೆ ಒಲಿದದ್ದು ಯಾರಿಗೆ?
ಇಟಲಿಯ giuseppe farina

ಎಫ್1 ಕಾರಿನ ಎಂಜಿನ್ ಯಾವುದು?

ಬೆಸ್ ಪೊಕ್ 2.4 ಲೀಟರಿನ ವಿ8 ರೇಸಿಂಗ್ ಎಂಜಿನ್

ಎಫ್1 ಕಾರು ಎಷ್ಟು ತೂಕವಿದೆ?

600 ಕೆ.ಜಿಗಿಂತ ಕಡಿಮೆ!

ಎಫ್1 ಕಾರಿನ ಕಾರ್ಯಕ್ಷಮತೆ ಎಷ್ಟು?

2.8 ಸೆಕೆಂಡಿನಲ್ಲಿ ಪ್ರತಿಗಂಟೆಗೆ 1 ಸಾವಿರ ಕಿ.ಮೀ. ವೇಗ ಪಡೆದುಕೊಳ್ಳಬಹುದು.

ಫಾರ್ಮುಲಾ ಒನ್ ವೀಕೆಂಡ್ ಅಂದ್ರೆ?
ಹೆಚ್ಚಾಗಿ ವೀಕೆಂಡ್ ರೇಸ್ ಶುಕ್ರವಾರ ಎರಡು ಅಭ್ಯಾಸ ಪಂದ್ಯದಿಂದ ಆರಂಭವಾಗುತ್ತದೆ. ಶನಿವಾರವೂ ಒಂದು ಅಭ್ಯಾಸ ರೇಸ್ ಇರುತ್ತದೆ. ಇದರಲ್ಲಿ ಆಯ್ಕೆಯಾದವರಿಗೆ ಭಾನುವಾರ ಪ್ರಮುಖ ರೇಸ್ ಇರುತ್ತದೆ

More from DriveSpark

Article Published On: Saturday, October 15, 2011, 15:30 [IST]
English summary
Formula One, also known as F1. Do you know about FIA Formula One World Championship? Here is importent information about formula One.
Read more on ಎಫ್1 ಕಾರು f1 car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+