ಬಾಂಗ್ಲಾ ದೇಶ ಪ್ರವೇಶಿಸಿದ ಟಾಟಾ ನ್ಯಾನೊ

ಶ್ರೀಲಂಕಾ ಮತ್ತು ನೇಪಾಳದ ನಂತರ ಬಾಂಗ್ಲಾ ದೇಶಕ್ಕೆ ನ್ಯಾನೊ ಪ್ರವೇಶಿಸಿದೆ. ನಿಟೊಲ್ ಮೋಟರ್ಸ್ ಬಾಂಗ್ಲಾ ದೇಶದಲ್ಲಿ ನ್ಯಾನೊ ಮಾರಾಟ ಮಾಡಲಿದೆ. ಬಾಂಗ್ಲಾದ ಅಬಕಾರಿ ಸುಂಕ ಹೆಚ್ಚಿರುವುದರಿಂದ ನ್ಯಾನೊ ದರ ಸುಮಾರು 3 ಪಟ್ಟು ಹೆಚ್ಚಾಗಿದೆಯೆಂದು ನಿಟೊಲ್ ಮೋಟರ್ಸ್ ಹೇಳಿದೆ.
ಬಾಂಗ್ಲಾದಲ್ಲಿ ಸುಮಾರು 3 ಸಾವಿರ ನ್ಯಾನೊ ಕಾರುಗಳನ್ನು ಮಾರಾಟ ಮಾಡುವ ನಿರೀಕ್ಷೆಯನ್ನು ಟಾಟಾ ಮೋಟರ್ಸ್ ವ್ಯಕ್ತಪಡಿಸಿದೆ. ಪುಟ್ಟ ನ್ಯಾನೊ ಕಾರು ಪ್ರತಿಲೀಟರ್ ಗೆ ಸುಮಾರು 25 ಕಿ.ಮೀ. ಮೈಲೇಜ್ ಹೊಂದಿರುವುದರಿಂದ ಹೆಚ್ಚು ಬೇಡಿಕೆ ಪಡೆಯುವ ನಿರೀಕ್ಷೆಯು ಕಂಪನಿಗಿದೆ.


Click it and Unblock the Notifications








