ಟಾಟಾ ಮೋಟರ್ಸ್ "407 ಬೆಳ್ಳಿ ಹಬ್ಬ" ಸಂಭ್ರಮ

ದೇಶದ ರಸ್ತೆಯಲ್ಲಿ ಹೆಚ್ಚು ಜನರಿಗೆ 407 ವಾಹನ ಇಷ್ಟವಾಗಿದೆ. ಇದು 25 ವರ್ಷಗಳ ಹಿಂದೆ ರಸ್ತೆಗಿಳಿದಾಗ ಟೊಯೊಟಾ, ಮಿಟ್ಸುಬಿಸಿ, ನಿಸ್ಸಾನ್ ಮತ್ತು ಮಾಜ್ದಾದಂತಹ ಅಂತರ್ ರಾಷ್ಟ್ರೀಯ ಕಂಪನಿಗಳು ಪೈಪೋಟಿ ನಡೆಸುತ್ತಿದ್ದವು. ಆದರೆ ಟಾಟಾ ಫೋರ್ ನಾಟ್ ಸೆವೆನ್ 1986ರಲ್ಲಿ ರಸ್ತೆಗಿಳಿದ ನಂತರ ಹೆಚ್ಚು ಜನರನ್ನು ತಲುಪಿದೆ.
"ಕಂಪನಿಯು ಈ ಸೆಗ್ಮೆಂಟಿನಲ್ಲಿ 1996ರವರೆಗೆ ಶೇಕಡ 70ರಷ್ಟು ಮಾರುಕಟ್ಟೆ ಪಾಲು ಹಿಡಿದಿಟ್ಟುಕೊಳ್ಳಲು ಸಮರ್ಥವಾಗಿತ್ತು. ಕಂಪನಿಯು ಮುಂದಿನ ವರ್ಷ ಈ ಉತ್ಪನ್ನದ ಪರಿಷ್ಕೃತ ಆವೃತ್ತಿ ಹೊರತರಲಿದೆ" ಎಂದು ಕಂಪನಿ ಹೇಳಿದೆ.


Click it and Unblock the Notifications








