ಫೋರ್ಡ್ ಫಿಗೊ ಭಾರತ ಯಾತ್ರೆ ಮುಕ್ತಾಯ

Ford Figo Bharat Yatra
ದೇಶದ 20ಕ್ಕೂ ಹೆಚ್ಚು ರಾಜ್ಯಗಳಲ್ಲಿ ಸಾವಿರಕ್ಕೂ ಹೆಚ್ಚು ನಗರಗಳಲ್ಲಿ ಫೋರ್ಡ್ ಫಿಗೊ ನಡೆಸಿದ ಭಾರತ ಯಾತ್ರೆ ಇಂದು(ಅ 20)ರಂದು ಮುಕ್ತಾಯಗೊಂಡಿದೆ. ಈ ಸಮಯದಲ್ಲಿ ಕಂಪನಿಯು ದಾಖಲೆಯ 17 ಸಾವಿರ ಜನರಿಂದ ಫಿಗೊ ಟೆಸ್ಟ್ ಡ್ರೈವ್ ಮಾಡಿಸಿತ್ತು.

ಅತ್ಯಧಿಕ ಪ್ರಶಸ್ತಿ ಬಾಚಿಕೊಂಡಿರುವ ಫಿಗೊ ಕಾರಿನ ಮೊದಲ ಚಾಲನೆ ಅನುಭವವನ್ನು ಗ್ರಾಹಕರಿಗೆ ನೀಡಲು ಕಂಪನಿಯು ಭಾರತ ಯಾತ್ರೆ ಆರಂಭಿಸಿತ್ತು. ಇದು ಜುಲೈ ತಿಂಗಳಲ್ಲಿ ಆರಂಭವಾಗಿತ್ತು. ಈ ಯಾತ್ರೆ ಹಬ್ಬದ ಸೀಸನಿನಲ್ಲಿ ಕೊನೆಗೊಂಡಿದ್ದು ಹೆಚ್ಚು ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ ಎಂದು ಕಂಪನಿ ಪ್ರಕಟಿಸಿದೆ.

"ಭಾರತ ಯಾತ್ರೆಯಲ್ಲಿ ಹೆಚ್ಚು ಜನರು ಫಿಗೊ ಕುರಿತು ಕುತೂಹಲ ತಾಳಿದ್ದಾರೆ. ಸ್ಪಾಟಲ್ಲೇ ಹಲವು ಮಂದಿ ಬುಕ್ಕಿಂಗ್ ಮಾಡಿದ್ದಾರೆ. ಸಾವಿರಾರು ಜನರು ಟೆಸ್ಟ್ ಡ್ರೈವ್ ಮಾಡಿದ್ದು ನಮಗೆ ಹೆಚ್ಚು ಸಂತೃಪ್ತಿ ನೀಡಿದೆ" ಎಂದು ಫೋರ್ಡ್ ಇಂಡಿಯಾ ಮಾರಾಟ ವಿಭಾಗದ ಪ್ರಧಾನ ವ್ಯವಸ್ಥಾಪಕರು ಹೇಳಿದ್ದಾರೆ.

2010ರಲ್ಲಿ ಫೋರ್ಡ್ ಇಂಡಿಯಾ 83,887 ವಾಹನ ಮಾರಾಟ ಮಾಡಿದ್ದು, ಇದಕ್ಕೂ ಹಿಂದಿನ ವರ್ಷದ ಮಾರಾಟಕ್ಕೆ ಹೋಲಿಸಿದರೆ ಶೇಕಡಾ 184ರಷ್ಟು ಏರಿಕೆ ದಾಖಲಿಸಿದೆ. ಇದರಲ್ಲಿ ಫಿಗೊ ಮಾರಾಟವೇ ಸುಮಾರು 68 ಸಾವಿರ ಯೂನಿಟ್ ಆಗಿದೆ. ದೇಶದ ವಾಹನ ಉದ್ಯಮದಿಂದ ಝಿಗ್ ವೀಲ್ ವರ್ಷದ ಕಾರ್ ಸೇರಿದಂತೆ ಸುಮಾರು 20 ಪ್ರಶಸ್ತಿಗಳನ್ನು ಫೋರ್ಡ್ ಫಿಗೊ ತನ್ನದಾಗಿಸಿಕೊಂಡಿದೆ.

ಫೋರ್ಡ್ ಫಿಗೊ 4 ಸಿಲಿಂಡರ್, 1,399 ಸಿಸಿ ಸಿಆರ್ ಡಿಐ ಎಂಜಿನ್ ಹೊಂದಿದೆ. ಇದು ಸಾವಿರ ಆರ್ ಪಿಎಂಗೆ 68 ಹಾರ್ಸ್ ಪವರ್ ನೀಡುತ್ತದೆ. ಫಿಗೊ ಕಾರಲ್ಲಿ 5 ಸ್ಪೀಡ್ ಮ್ಯಾನುಯಲ್ ಟ್ರಾನ್ಸ್ ಮಿಷನ್ ಇದೆ. ಫೋರ್ಡ್ ಫಿಗೊ ಡೀಸಲ್ ದರ ಸುಮಾರು 4.55 ಲಕ್ಷ ರೂ.ನಿಂದ 5.44 ಲಕ್ಷ ರೂ.ವರೆಗಿದೆ.

More from DriveSpark

Article Published On: Thursday, October 20, 2011, 12:25 [IST]
English summary
Ford India's "Ford Figo Bharat Yatra" largest activation drive successfully ends. It started in July 2011 and attracts huge number of buyers. Impressive number of enquiries, on-spot bookings and thousands of test drives conducted during this Yatra.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+