ವಾಹನಸ್ಪೋಟ: ಜಗತ್ತಿನಲ್ಲಿ ಒಟ್ಟು ಎಷ್ಟು ವಾಹನಗಳಿವೆ?

ಜರ್ಮನಿಯ ಬರ್ಲಿನ್ ನಗರದಲ್ಲಿ ಪ್ರತಿದಿನ ಹತ್ತಾರು ಕಾರುಗಳಿಗೆ ಯಾರೋ ಬೆಂಕಿಯುಡುತ್ತಿದ್ದರು. ಈ ವರ್ಷದ ಜೂನ್ ತಿಂಗಳಿನಿಂದ ಆರಂಭವಾದ ಈ ಕೊಳ್ಳಿದೆವ್ವದ ಕಾಟ ಅಲ್ಲಿನ ಪೊಲೀಸರಿಗೆ ತಲೆನೋವಾಗಿತ್ತು. ಕಾರಿಗೆ ಬೆಂಕಿಯಿಡುವ ವ್ಯಕ್ತಿಗಳನ್ನು ಪತ್ತೆ ಹಚ್ಚಲು ವಿಶೇಷ ಕ್ಯಾಮರಾಗಳನ್ನು, ಹೆಲಿಕಾಫ್ಟರ್ ಗಳನ್ನು ಬಳಸಲಾಗಿತ್ತು.
ಇದೀಗ ಕೊನೆಗೂ ಆತ ಸಿಕ್ಕಿಬಿದ್ದ. "ನನಗೆ ಕೆಲಸ ಇರಲಿಲ್ಲ. ಸಾಕಷ್ಟು ಸಾಲ ಮಾಡಿದೆ. ನಾನು ಇಷ್ಟು ಕಷ್ಟದಲ್ಲಿರುವಾಗ ಉಳಿದ ವ್ಯಕ್ತಿಗಳು ಐಷಾರಾಮಿ ಕಾರುಗಳಲ್ಲಿ ಜೀವನ ಸಾಗಿಸುವುದು ನನಗೆ ಇಷ್ಟವಾಗಲಿಲ್ಲ" ಎಂದು ಆತ ಪೊಲೀಸರಿಗೆ ತಿಳಿಸಿದ್ದ.
ಆತ ಕಾರಿಗೆ ಬೆಂಕಿ ಕೊಟ್ಟ ನೆಪದಲ್ಲಿ ವಿಶ್ವದ ಕಾರು ಸಂಖ್ಯೆಯ ಕುರಿತು ದೃಷ್ಟಿ ಹರಿಸೋಣ. ಜಾಗತಿಕವಾಗಿ ಈಗ ಕಾರು ಸಂಖ್ಯೆ ಹೆಚ್ಚಿದೆ. ಆದರೆ ಹೆಚ್ಚಿನ ಜನರಿಗೆ ಕಾರು ಕೊಳ್ಳಲು ಸಾಧ್ಯವಾಗುತ್ತಿಲ್ಲ. ಜಾಗತಿಕವಾಗಿ ಬಡವ ಬಲ್ಲಿದ ಅನುಪಾತ ಇದಕ್ಕೆ ಕಾರಣ. ಆದರೆ ಜನಸಂಖ್ಯೆಯಂತೆ ಕಾರುಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ.
ಪ್ರತಿವರ್ಷ ಎಷ್ಟು ಕಾರುಗಳು ಉತ್ಪಾದನೆಯಾಗುತ್ತಿವೆ?
2009ರಲ್ಲಿ ಜಗತ್ತಿನಲ್ಲಿ ಒಟ್ಟು ಉತ್ಪಾದನೆಯಾದ ಕಾರುಗಳ ಸಂಖ್ಯೆ 51,971,328 ಯನಿಟ್. 2006ನೇ ಇಸವಿಯಲ್ಲಿ 49,886,549 ಪ್ರಯಾಣಿಕ ಕಾರುಗಳ ಉತ್ಪಾದನೆಯಾಗಿತ್ತು. ಒಂದು ಅಂದಾಜು ಪ್ರಕಾರ ಜಾಗತಿಕವಾಗಿ ಇರುವ ಒಟ್ಟು ಪ್ರಯಾಣಿಕ ಕಾರುಗಳ ಸಂಖ್ಯೆ 60 ಕೋಟಿ.
| ವರ್ಷ | ಉತ್ಪಾದನೆಯಾದ ಕಾರು |
| 2009 | 51,971,328 |
| 2008 | 52,940,559 |
| 2007 | 54,920,317 |
| 2006 | 49,886,549 |
| 2005 | 46,862,978 |
| 2004 | 44,554,268 |
| 2003 | 41,968,666 |
| 2002 | 41,358,394 |
| 2001 | 39,825,888 |
| 2000 | 41,215,653 |
| 1999 | 39,759,847 |
ಜಗತ್ತಿನ ಸುದ್ದಿ ಬಿಟ್ಟಾಕಿ... ಭಾರತದಲ್ಲಿ ಎಷ್ಟು ವಾಹನ ಉತ್ಪಾದನೆಯಾಗುತ್ತೆ ಗೊತ್ತಾ? ಮುಂದಿನ ಪುಟ ನೋಡಿ


Click it and Unblock the Notifications








