ತವರು ನೆಲದಲ್ಲಿ ಕರಣ್ ಕೈಗೆ ಸಿಗದ ಎಫ್ 1 ಕಾರು

ಆದರೆ, ಭಾರತದ ಎಫ್ 1 ಡ್ರೈವರ್ ಕರಣ್ ಚಾಂದೋಕ್ ಗೆ ಮಾತ್ರ ತೀವ್ರ ನಿರಾಶೆಯಾಗಿದೆ. ರೇಸ್ ನಲ್ಲಿ ಸಾಕಷ್ಟು ಅನುಭವ ಪಡೆಯದ ಹಿನ್ನೆಲೆಯಲ್ಲಿ ಕರಣ್ ಚಾಂದೊಕ್ ಅವರಿಗೆ ಟೀಮ್ ಲೋಟಸ್ ಭಾರತದಲ್ಲಿ ನಡೆಯುವ ಫಾರ್ಮುಲಾ ಒನ್ ಏರ್ ಟೆಲ್ ಗ್ರ್ಯಾನ್ ಪ್ರಿ ಭಾಗವಹಿಸಲು ಅವಕಾಶ ನೀಡಿಲ್ಲ.
ಅ.30 ರಂದು ನಡೆಯುವ ರೇಸ್‌ನಲ್ಲಿ ಮಲೇಷ್ಯ ತಂಡ ಟೀಮ್ ಲೋಟಸ್ ತನ್ನ ಅನುಭವಿ ರೇಸ್‌ತಾರೆಗಳಾದ ಜಾನಾ ಟ್ರೂಲಿ ಮತ್ತು ಹೈಕಿ ಕೋವಲೈನೆನ್ ಅವರನ್ನು ಇಳಿಸಲು ನಿರ್ಧರಿಸಿದೆ. ಫಾರ್ಮುಲಾ ರೇಸ್‌ನಲ್ಲಿ ಒಟ್ಟಾರೆ 10ನೇ ಸ್ಥಾನ ಉಳಿಸಿಕೊಳ್ಳುವ ದೃಷ್ಟಿಯಿಂದ ಮಲೇಶ್ಯನ್ ತಂಡ ಈ ನಿರ್ಧಾರ ಮಾಡಿದೆ.
ಟೀಮ್ ಲೋಟಸ್ ತಂಡದ ಈ ನಿರ್ಧಾರದಿಂದ ಭಾರತದಲ್ಲಿ ನಡೆಯಲಿರುವ ಉದ್ಘಾಟನಾ ಎಫ್1 ರೇಸ್‌ನಲ್ಲಿ ನಾರಾಯಣ್ ಕಾರ್ತಿಕೇಯನ್ ಮಾತ್ರ ಭಾರತದ ಏಕೈಕ ರೇಸ್‌ತಾರೆಯಾಗಿ ಭಾಗವಹಿಸಲಿದ್ದಾರೆ. ಕಾರ್ತಿಕೇಯನ್ ಹಿಸ್ಪಾನಿಯಾ ತಂಡದ ಪರ ಸ್ಪರ್ಧಿಸಲಿದ್ದಾರೆ. ಚಾಂದೊಕ್ ಭಾರತದ ಎರಡನೇ ಫಾರ್ಮುಲಾ ಒನ್ ಡ್ರೈವರ್ ಆಗಿದ್ದಾರೆ.
ವಿಜಯ್ ಮಲ್ಯ ತಂಡ ಫೋರ್ಸ್ ಇಂಡಿಯಾದಲ್ಲಿಲ ಇನ್ನೂ ಭಾರತೀಯ ಮೂಲದ ಡ್ರೈವರ್ ಗಳಿಗೆ ಅವಕಾಶ ಸಿಕ್ಕಿಲ್ಲ.


Click it and Unblock the Notifications








