ಹೊಸ ಬೀಟಲ್ ಕಾರು ಖರೀದಿಸಿದ ಬಿಪಾಶಾ ಬಸು

ಇಂತಹ ಮಿಡತೆ ಕಾರಿಗೆ ಈಗ "ಬಿಪಾಶಾ ಬಸು" ಬಾಸು. ಬಾಲಿವುಡ್ ಸೆಕ್ಸಿ ನಟಿಗೆ ಬೀಟಲ್ ಹೆಚ್ಚು ಸೆಕ್ಸಿಯಾಗಿ ಕಂಡಿತಂತೆ. "ನಾನು ಹೊಸ ಬೀಟಲ್ ಕಾರು "ಬ್ರಾಡ್" ಖರೀದಿಸಿದ್ದೀನಿ. ಇಡೀ ಮುಂಬೈನಲ್ಲಿ ಇದರಲ್ಲಿ ಸುತ್ತಲಿದ್ದೀನಿ, ಯುಪ್ಪಿ!" ಅಂತ ಆಕೆ ಟ್ವಿಟ್ಟರಿನಲ್ಲಿ ಬರೆದುಕೊಂಡಿದ್ದಾರೆ. ಬ್ರಾಡ್ ಅಂದ್ರೆ ಆಕೆ ಬೀಟಲ್ ಕಾರಿಗೆ ಇಟ್ಟ ಹೊಸ ಹೆಸರು.
ಗ್ರೀಸ್ ನಲ್ಲಿ "ಜೋದಿ ಬ್ರೀಕರ್ಸ್" ಸಿನಿಮಾ ಶೂಟಿಂಗ್ ನಲ್ಲೂ ಬಿಪಾಶಾ ಬ್ಯುಸಿಯಂತೆ. ಆದಷ್ಟು ಬೇಗ ಮುಂಬೈ ರಸ್ತೆಯಲ್ಲಿ ಬೀಟಲ್ ಸವಾರಿ ಮಾಡಲು ಆಕೆ ಕಾಯುತ್ತಿದ್ದಾರೆ. ಜೋದಿ ಬ್ರಿಕರ್ಸ್ ಸಿನಿಮಾದಲ್ಲಿ ಆರ್ ಮಾಧವನ್ ಸಹನಟ.
ಈ ಹಿಂದೆ ತಾನು ಡ್ರೈವಿಂಗ್ ಕಲಿಯುತ್ತಿರುವುದಾಗಿ ಬಿಪಾಶಾ ಬಸು ಬರೆದುಕೊಂಡಿದ್ದರು. ಯಾಕಂದ್ರೆ ನನ್ನ ಕೆಲಸ ಕಾರ್ಯಗಳಿಗೆ ಇತರರನ್ನು ಅವಲಂಬಿಸಿಕೊಳ್ಳುವುದು ನಂಗೆ ಚೂರು ಇಷ್ಟವಿಲ್ಲ ಅಂತ ತಿಳಿಸಿದ್ದರು. ಇದೀಗ ಪುಟ್ಟ ಬೀಟಲ್ ಬ್ರಾಡಿನಲ್ಲಿ ಆಕೆ ಒಬ್ಬಳೇ ಸವಾರಿ ಮಾಡುತ್ತಾರ? ಅಲ್ಲ ನನ್ನನ್ನು ಕರಿಬಹುದಾ? ಅಂತ ಕೆಲವರು ಆಸೆ ಬಿಡುತ್ತಿದ್ದಾರಂತೆ.


Click it and Unblock the Notifications








