ದೇಶದ ರಸ್ತೆಗೆ ಅಟಾಂ ಸ್ಪೋರ್ಟ್ಸ್ ಕಾರು

What Do You Think About The Ariel Atom?
ಬ್ರಿಟನಿನ ಸ್ಪೋರ್ಟ್ಸ್ ವಾಹನ ತಯಾರಿಕಾ ಕಂಪನಿ ಏರಿಯಲ್ ಅಟಾಂ ಕಾರಿನ ಮೂಲಕ ದೇಶದ ವಾಹನ ಮಾರುಕಟ್ಟೆ ಪ್ರವೇಶಿಸಿದೆ. ಆದರೆ ಅಟಾಂ ಕಾರಿನ ದರ ಕೇಳಿದರೆ ಅಟಾಂ ಬಾಂಬ್ ಕಂಡ ಹಾಗೆ ಬೆಚ್ಚಿಬೀಳದಿರಿ. ಇದರ ಆರಂಭಿಕ ದರ ಸುಮಾರು 55 ಲಕ್ಷ ರುಪಾಯಿ.

ಅಟಾಂ ಕಾರುಗಳು ಹಗುರ ಮತ್ತು ಅತ್ಯಧಿಕ ಶಕ್ತಿಯಿಂದ ಜನಪ್ರಿಯವಾಗಿವೆ. ಇದು ವಿಶ್ವದ ವೇಗದ ಆಕ್ಸಿಲರೇಷನ್ ಕಾರು ಕೂಡ ಹೌದು. ಅಂದರೆ 2.5 ಸೆಕೆಂಡಿನಲ್ಲಿ ಇದರಲ್ಲಿ ಪ್ರತಿಗಂಟೆಗೆ 100 ಕಿ.ಮೀ. ವೇಗ ಪಡೆದುಕೊಳ್ಳಬಹುದು. ಬುಗಾಟಿ ವೆರೊನ್ ಕಾರಿನ 16 ಕೋಟಿ ರು. ದರಕ್ಕೆ ಹೋಲಿಸಿದರೆ ಇದು ಅಗ್ಗದ ಕಾರು.

ಭಾರತದಲ್ಲಿ ಏರಿಯಲ್ ಕಂಪನಿಯು InterGloble enterprises ಜೊತೆ ಪಾಲುದಾರಿಕೆ ಮಾಡಿದೆ. ಇಂಟರ್ ಗ್ಲೋಬ್ ಜನರ ಬೇಡಿಕೆಗೆ ತಕ್ಕಂತೆ ಅಟಾಂ ಕಾರುಗಳನ್ನು ಆಮದುಮಾಡಿಕೊಳ್ಳಲಿದೆ.

ಇತ್ತೀಚೆಗೆ ದೇಶದ ರಸ್ತೆಗೆ ಫೆರಾರಿ ಕಂಪನಿಯು ಎಫ್ಎಫ್ ಎಂಬ ಸ್ಪೋರ್ಟ್ಸ್ ಯುಟಿಲಿಟಿ ಕಾರು ಪರಿಚಯಿಸಿತ್ತು. ಇದಕ್ಕೂ ಮೊದಲು ಲಂಬೊರ್ಗಿನಿ ಅವೆಂಟಡೊರ್ ಮತ್ತು ರೇಂಜ್ ರೋವರ್ ಇವೊಕ್ ಕೂಡ ಬಂದಿದೆ. ಒಂದರ್ಥದಲ್ಲಿ ದೇಶದ ರಸ್ತೆಯಲ್ಲಿ ಸ್ಪೋರ್ಟ್ಸ್ ಕಾರುಗಳ ಆಟ ಸುರುವಾಗಿದೆ.

ಏರಿಯಲ್ ಕಾರು ಆವೃತ್ತಿಗಳು
* ಏರಿಯಲ್ ಅಟಾಂ
* ಏರಿಯಲ್ ಅಟಾ 2
* ಏರಿಯಲ್ ಅಟಾಂ 3
* ಏರಿಯಲ್ ಅಟಾಂ 500 ವಿ8

ಟೆಕ್ ಮಾಹಿತಿ

ಎಂಜಿನ್: 2.0ಎಲ್ ಹೋಂಡಾ ಕೆ20ಎ1, 4 ಸಿಲಿಂಡರ್, ಐವಿಟೆಕ್ ಅಥವಾ 2.0ಎಲ್ ಸೂಪರ್ ಚಾರ್ಜ್ ಡ್, 2.2 ಎಲ್ ಅಥವಾ 2.4 ಲೀಟರ್ ಜಿಎಂ ಎಕೊಟೆಕ್ 4 ಸಿಲಿಂಡರ್
* ಆಕ್ಸಿಕರೇಷನ್: 2.5 ಸೆಕೆಂಡಿನಲ್ಲಿ ಗಂಟೆಗೆ 0-100 ಕಿ.ಮೀ. ವೇಗ
* ಗರಿಷ್ಠ ವೇಗ: ಪ್ರತಿಗಂಟೆಗೆ 250 ಕಿ.ಮೀ.
* ಶಕ್ತಿ: 245 ಹಾರ್ಸ್ ಪವರ್, ಸೂಪರ್ ಚಾರ್ಜ್ ಡ್ ಎಂಜಿನ್ ನಲ್ಲಿ 300 ಹಾರ್ಸ್ ಪವರ್

More from DriveSpark

Article Published On: Thursday, November 10, 2011, 13:27 [IST]
English summary
Ariel, the British sports car brand that entered the Indian market by launching the Atom is eying motor enthusiasts to boost its presence. The Atom range of cars now available in INDia are not cheap cars. With a starting price of Rs.55 lakhs, the Ariel sports cars are for enthusiasts only.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+